ಬೆಂಗಳೂರು: ಈಗಾಗಲೇ ಔಷಧ ಬಂದಿರುವುದರಿಂದ ಹಾಗೂ ಕೋವಿಡ್ ಎರಡನೇ ಅಲೆಯ ಬಗ್ಗೆ ರಾಜ್ಯ ಸರ್ಕಾರ ಈ ಬಾರಿ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೂ ಹೆಚ್ಚಿಗೆ ಹರಡದಂತೆ ಎಲ್ಲರೂ ಸೇರಿ ಪ್ರಯತ್ನಿಸಬೇಕಾಗಿದೆ. ಅಷ್ಟೇ ಅಲ್ಲ “ಜೀವದ ಜೊತೆ ಜೀವನೋಪಾಯ" ಅಳವಡಿಸಿಕೊಳ್ಳೋಣ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ ರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಇತ್ತೀಚೆಗೆ ದಿನಕ್ಕೆ 2000ಕ್ಕಿಂತ ಹೆಚ್ಚಿಗೆ ಕೋವಿಡ್ ಕೇಸ್ ಕಂಡು ಬರುತ್ತಿರುವುದು ಶೋಚನಿಯವಾಗಿದೆ. ಕಳೆದ ಒಂದು ವರ್ಷದಿಂದ ಕೊರೊನ ಮಹಾಮಾರಿ ನಮ್ಮ ಉದ್ಯಮಕ್ಕೆ ಬಹುದೊಡ್ಡ ಹೊಡೆತಕೊಟ್ಟಿದೆ ಎಂದರು.
ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ ರಾವ್ ಹೇಳಿಕೆ ಕೊರೊನಾದಿಂದ ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುತ್ತಿರುವಾಗ, ಮತ್ತೊಮ್ಮೆ ಕೋವಿಡ್ -19 ಹಾವಳಿಯಿಂದ ನಮ್ಮ ಉದ್ಯಮ ಹಾಗೂ ನಮ್ಮನ್ನೇ ನಂಬಿರುವ ರೈತ ಬಾಂಧವರು ಮತ್ತು ಕಾರ್ಮಿಕರಿಗೆ ಬಹುದೊಡ್ಡ ಹೊಡೆತವಾಗಬಹುದು. ಎಲ್ಲ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಹಕರು ಸರ್ಕಾರದ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮವನ್ನು ಬಹಳ ಎಚ್ಚರಿಕೆಯಿಂದ ಪರಿಪಾಲಿಸಬೇಕಿದೆ ಎಂದರು.
ರಾಜ್ಯ ಸರ್ಕಾರದ ಜೊತ ಸಂಪೂರ್ಣವಾಗಿ ಕೈಜೋಡಿಸಲಿದ್ದೇವೆ, ಹೀಗಿದ್ದರೂ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಲಾಕ್ಡೌನ್ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಸರ್ಕಾರದ ಮಹತ್ವದ ಕೋವಿಡ್ ಸಭೆ ಹಾಗೂ ಕಠಿಣ ನಿಯಮಗಳ ಕುರಿತು ಮಾತನಾಡಿದರು.
ಓದಿ : ಕೊರೊನಾ ಲಸಿಕೆ ಕೊರತೆ : ಬ್ರೆಜಿಲ್ ವಿದೇಶಾಂಗ ಸಚಿವ ರಾಜೀನಾಮೆ