ಬೆಂಗಳೂರು:ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂನ್ 14ರಿಂದ ಲಾಕ್ಡೌನ್ ವಿನಾಯಿತಿ ನೀಡಿ ಶೇ. 30ರಷ್ಟು ಕೆಲಸಗಾರರನ್ನು ಬಳಸಿ ಗಾರ್ಮೆಂಟ್ಸ್ ತೆರೆಯಲು ಅವಕಾಶ ನೀಡಿದ್ದಾರೆ. ಆದರೆ ಅಂಗಡಿಗಳು ಬಾಗಿಲು ಮುಚ್ಚಿದರೆ ಏನು ಪ್ರಯೋಜನ ಎಂದು ನಗರ ಜವಳಿ ಅಂಗಡಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಗಾರ್ಮೆಂಟ್ಸ್ಗಳಲ್ಲಿ ತಯಾರಾಗುವ ಬಟ್ಟೆಗಳನ್ನ ಅಂಗಡಿ ಮುಂಗಟ್ಟಿಗೆ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಕಚ್ಚಾ ವಸ್ತುಗಳು ಸಗಟು ಅಂಗಡಿಗಳಿಂದ ಗಾರ್ಮೆಂಟ್ಸ್ಗೆ ಮಾರಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣವಾಗದಿದ್ದರೆ ಗಾರ್ಮೆಂಟ್ಸ್ ಹಾಗೂ ಇತರೆ ಕೈಗಾರಿಕೆಗಳನ್ನ ತೆರೆದು ಯಾವುದೇ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.