ಕರ್ನಾಟಕ

karnataka

ETV Bharat / state

ಇಂದು ದೆಹಲಿಗೆ ವಾಪಸ್​ ಆಗಲಿರುವ ರಾಷ್ಟ್ರಪತಿ.. ರಾಜಭವನದಲ್ಲಿ ವಿಶೇಷ ಔತಣಕೂಟ ಆಯೋಜನೆ - ವಿಶ್ವ ವಿಖ್ಯಾತ ಮೈಸೂರು ದಸರಾ

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎರಡು ದಿನಗಳ ರಾಜ್ಯ ಪ್ರವಾಸ ಮುಕ್ತಾಯವಾಗಿದ್ದು, ಇಂದು ನವದೆಹಲಿಗೆ ವಾಪಸಾಗಲಿದ್ದಾರೆ.

president
ರಾಷ್ಟ್ರಪತಿ

By

Published : Sep 28, 2022, 7:02 AM IST

ಬೆಂಗಳೂರು: ದಸರಾ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡು ದಿನಗಳ ರಾಜ್ಯ ಪ್ರವಾಸ ಮುಗಿಸಿ ಇಂದು ನವದೆಹಲಿಗೆ ವಾಪಸಾಗಲಿದ್ದಾರೆ. ಈ ಹಿನ್ನೆಲೆ ನಿನ್ನೆ ಗೌರವಾರ್ಥವಾಗಿ ರಾಜಭವನದಲ್ಲಿ ಔತಣಕೂಟ ಏರ್ಪಡಿಸಿ ಸತ್ಕರಿಸಲಾಯಿತು.

ಮೈಸೂರು ದಸರಾ ಉದ್ಘಾಟಿಸಿ, ಹುಬ್ಬಳ್ಳಿ ಪ್ರವಾಸ ಮುಗಿಸಿ ಮೊನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ರಾಷ್ಟ್ರಪತಿಗಳು, ನಿನ್ನೆ ಇಡೀ ದಿನ ಬಿಡುವಿಲ್ಲದಂತೆ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದ ನಂತರ ರಾಜಭವನಕ್ಕೆ ತೆರಳಿದ ದ್ರೌಪದಿ ಮುರ್ಮು ಅವರಿಗೆ ರಾಜಭವನದ ಕಡೆಯಿಂದ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ರಾಷ್ಟ್ರಪತಿಗೆ ದೇವದಾಸಿಯರು ಹೊಲಿದ ಕೌದಿ, ಸೀರೆ ಕೊಟ್ಟ ಸುಧಾಮೂರ್ತಿ..!

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಿ.ವಿ. ಸದಾನಂದಗೌಡ ಸೇರಿದಂತೆ ಮುಂತಾದವರು ಔತಣಕೂಟದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಭಾರತದ ಅರ್ಥವ್ಯವಸ್ಥೆಯ ವಿಕಸನದಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾದುದ್ದು: ರಾಷ್ಟ್ರಪತಿ ದ್ರೌಪದಿ ಮುರ್ಮು

ABOUT THE AUTHOR

...view details