ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಶಿಫಾರಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಬ್ಲಾಕ್ ಸಮಿತಿಗಳಿಗೆ ಅಧ್ಯಕ್ಷರ ನೇಮಕ - Congress block committee
ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರದ ಹಲವು ಬ್ಲಾಕ್ಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭಿಸಿರುವ ಕಾಂಗ್ರೆಸ್, ಮೊದಲು ಅಧ್ಯಕ್ಷರನ್ನು ನೇಮಿಸಿ ಅವರ ಮೂಲಕ ಪದಾಧಿಕಾರಿಗಳನ್ನು ನೇಮಿಸಲು ಮುಂದಾಗಿದೆ.
![ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಬ್ಲಾಕ್ ಸಮಿತಿಗಳಿಗೆ ಅಧ್ಯಕ್ಷರ ನೇಮಕ President appointed to Congress block committee](https://etvbharatimages.akamaized.net/etvbharat/prod-images/768-512-10615214-thumbnail-3x2-net.jpg)
ಈ ಸಂಬಂಧ ಅಧಿಕೃತ ಪ್ರಕಟಣೆ ಕೆಪಿಸಿಸಿ ಮೂಲಕ ಹೊರ ಬಿದ್ದಿದೆ. ಸುಳ್ಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸುಳ್ಯ ಬ್ಲಾಕ್ಗೆ ಪಿ.ಸಿ.ಜಯರಾಮ್ ಹಾಗೂ ಕಡಬ ಬ್ಲಾಕ್ಗೆ ಸುಧೀರ್ ಕುಮಾರ್ ಶೆಟ್ಟಿ, ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಂಗಳೂರು ನಗರ ಬ್ಲಾಕ್ಗೆ ಪ್ರಕಾಶ್ ಬಿ. ಸಾಲಿಯಾನ, ಬೆಳ್ತಂಗಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿ ನಾಗರ ಬ್ಲಾಕ್ಗೆ ಶೈಲೇಶ್ ಕುಮಾರ್ ಹಾಗೂ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ಗೆ ರಂಜನ್ ಜಿ. ಗೌಡ, ಪುತ್ತೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿಟ್ಲ-ಉಪ್ಪಿನಂಗಡಿ ಬ್ಲಾಕ್ಗೆ ರಾಜಾರಾಮ್ ಕೆ.ಬಿ. ನೇಮಕಗೊಂಡಿದ್ದಾರೆ.
ಒಟ್ಟಾರೆ ರಾಜ್ಯದ ವಿವಿಧ ವಿಧಾನಸಭೆ ಕ್ಷೇತ್ರದ ಹಲವು ಬ್ಲಾಕ್ಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭಿಸಿರುವ ಕಾಂಗ್ರೆಸ್, ಮೊದಲು ಅಧ್ಯಕ್ಷರನ್ನು ನೇಮಿಸಿ ಅವರ ಮೂಲಕ ಪದಾಧಿಕಾರಿಗಳನ್ನು ನೇಮಿಸಲು ಮುಂದಾಗಿದೆ. ತಳಮಟ್ಟದ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಕಾಂಗ್ರೆಸ್ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.