ಕರ್ನಾಟಕ

karnataka

ETV Bharat / state

ಬೆಂಗಳೂರು ವಿವಿಯಲ್ಲಿ ಏರೋಸ್ಪೇಸ್ ರಿಸರ್ಚ್ ಕೋರ್ಸ್ ಆರಂಭಕ್ಕೆ ಸಿದ್ಧತೆ - ಏರೋಸ್ಪೇಸ್ ರೀಸರ್ಚ್ ಕೋರ್ಸ್

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಇಂಟರ್​​ನೆಟ್​ ಆಫ್ ಥಿಂಗ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್, ಸ್ಪೇಸ್ ಟೆಕ್ನಾಲಜಿ, ಏರೋ ಸ್ಪೇಸ್ ಸೇರಿ ಐದು ನೂತನ ರೀಸರ್ಚ್ ಕೋರ್ಸ್​​ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಹೇಳಿದರು.

Bangalore university
ಬೆಂಗಳೂರು ವಿಶ್ವವಿದ್ಯಾಲಯ

By

Published : Sep 7, 2020, 7:53 PM IST

ಬೆಂಗಳೂರು: ಇಸ್ರೋ ಸಂಸ್ಥೆ ಹಾಗೂ ಇಸ್ರೇಲ್ ದೇಶದ ನೆರವಿನೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಮತ್ತು ಸ್ಪೇಸ್ ಟೆಕ್ನಾಲಜಿಗೆ ಸಂಬಂಧಿಸಿದ ರಿಸರ್ಚ್ ಕೋರ್ಸ್​​​ಗಳನ್ನು (ಸಂಶೋಧನೆಗೆ ಸಂಬಂಧಿಸಿದ) ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ಏರೋಸ್ಪೇಸ್ ಹಾಗೂ ಸ್ಪೇಸ್ ಟೆಕ್ನಾಲಜಿಗೆ ಬೆಂಗಳೂರು ಅತ್ಯುತ್ತಮ ಸ್ಥಳ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ನಗರದಲ್ಲಿದೆ. ಇಸ್ರೋ ಸಹಕಾರ ಪಡೆದುಕೊಂಡು ಹಾಗೂ ಬಾಹ್ಯಾಕಾಶ ಸಂಬಂಧಿತ ವಿಚಾರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಇಸ್ರೇಲ್​ನೊಂದಿಗೆ ಒಪ್ಪಂದ ಮಾಡಿಕೊಂಡು ಹೊಸದಾಗಿ ಈ ರಿಸರ್ಚ್ ಕೋರ್ಸ್​​​ಗಳನ್ನು ಮುಂದಿನ ವರ್ಷದಿಂದ ವಿವಿಯಲ್ಲಿ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿವಿ ಬರೀ ಜ್ಞಾನಾರ್ಜನೆಗಷ್ಟೇ ಸೀಮಿತವಲ್ಲ, ಪಡೆದುಕೊಂಡ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವುದನ್ನೂ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಈ ನಿಟ್ಟಿನಲ್ಲಿ ವಿವಿಯು ಪ್ರಸಕ್ತ ಉದ್ಯೋಗ ಮಾರುಕಟ್ಟೆಗೆ ಪೂರಕವಾಗಿ ಒಟ್ಟು 37 ಹೊಸ ಕೋರ್ಸ್​ಗಳನ್ನು ಪ್ರಾರಂಭಿಸಿದೆ. ಅಲ್ಲದೇ, ಕೋರ್ಸ್​​​ಗೆ ಪೂರಕವಾಗಿ ಲ್ಯಾಬ್, ಪ್ರಾಕ್ಟಿಕಲ್ ಟ್ರೈನಿಂಗ್ ಹಾಗೂ ಇಂಟರ್ನ್ ಶಿಪ್​​ಗಳನ್ನು ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 10 ಸಾವಿರ ಉದ್ದಿಮೆಗಳಿವೆ. ಈ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ಕೋರ್ಸ್​​ಗಳನ್ನು ರೂಪಿಸಿದ್ದೇವೆ ಎಂದರು.

ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್

ಇಷ್ಟಲ್ಲದೇ ಇನ್ನೂ ಹತ್ತು ಕೋರ್ಸ್​​ಗಳನ್ನು ಆರಂಭಿಸಲು ಆಲೋಚಿಸಿದ್ದೇವೆ. ಮುಖ್ಯವಾಗಿ ಎಂಎಸ್ಸಿ ಇಂಟರ್​​ನೆಟ್​ ಆಫ್ ಥಿಂಗ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್, ಸ್ಪೇಸ್ ಟೆಕ್ನಾಲಜಿ, ಏರೋ ಸ್ಪೇಸ್ ಸೇರಿ ಐದು ನೂತನ ರಿಸರ್ಚ್ ಕೋರ್ಸ್​​ಗಳನ್ನು ಬೆಂಗಳೂರು ವಿವಿಯಲ್ಲಿ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಇಸ್ರೇಲ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ 50 ಎಕರೆ ಭೂಮಿ ಮೀಸಲಿಟ್ಟಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ವಿವರಿಸಿದರು.

ABOUT THE AUTHOR

...view details