ಕರ್ನಾಟಕ

karnataka

ETV Bharat / state

ಸನ್ನಡತೆ ಆಧಾರದಲ್ಲಿ 161 ಕೈದಿಗಳಗಳ ಬಿಡುಗಡೆಗೆ ಸಿದ್ಧತೆ - ಬೆಂಗಳೂರು ಸುದ್ದಿ,

2006-7ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದರು. ಆ ಬಳಿಕ ಜೈಲಿನಲ್ಲಿ ಹಲವು ಅಕ್ರಮಗಳು ಕಂಡು ಬಂದ ಬಳಿಕ ಹಲವು ವರ್ಷ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶ ಸಿಕ್ಕಿರಲಿಲ್ಲ. ಅದಾದ ಬಳಿಕ 2021ರಲ್ಲಿ 103 ಸಜಾ ಬಂಧಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು..

release of prisoners on basis of consent in Bengaluru, Bengaluru news, Bengaluru prisoners release news, ಬೆಂಗಳೂರಿನಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳು ಬಿಡುಗಡೆ, ಬೆಂಗಳೂರು ಸುದ್ದಿ, ಬೆಂಗಳೂರು ಕೈದಿಗಳ ಬಿಡುಗಡೆ ಸುದ್ದಿ,
ಕೈದಿಗಳಗಳ ಬಿಡುಗಡೆಗೆ ಸಿದ್ಧತೆ

By

Published : Mar 12, 2022, 9:00 AM IST

ಬೆಂಗಳೂರು : ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಒಟ್ಟು 161 ಕೈದಿಗಳನ್ನ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲು ರಾಜ್ಯಪಾಲರ ಅಂಕಿತ ದೊರೆತಿದೆ.

ರಾಜ್ಯಪಾಲರ ಅನುಮೋದನೆ ಬಳಿಕ ಆಯಾ ಸಜಾಬಂಧಿಗಳನ್ನ ಅವಧಿಗೂ ಮುನ್ನ ಬಿಡುಗಡೆಗೊಳಿಸಲು ಕಾರಾಗೃಹ ಇಲಾಖೆ ಸಿದ್ಧತೆ ನಡೆಸಿದೆ. ವಕೀಲ ಜಗದೀಶ್ ಕೊಲೆ ಸೇರಿದಂತೆ ಘೋರ ಅಪರಾಧ ಪ್ರಕರಣಳಲ್ಲಿ ಶಿಕ್ಷೆಗೆ ಗುರಿಯಾಗುವ ಕೈದಿಗಳು ಸನ್ನತಡೆ ತೋರಿದರೆ ಅವರನ್ನು ಅವಧಿ ಪೂರ್ವ ಬಿಡುಗಡೆ ಮಾಡಲು ಅವಕಾಶವಿದೆ.

ಓದಿ:ಬೆಂಗಳೂರಿಗರೇ ಗಮನಿಸಿ.. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಮಾ.16ರವರೆಗೆ ವಾಹನ ನಿಲುಗಡೆ ನಿಷೇಧ

2006-7ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದರು. ಆ ಬಳಿಕ ಜೈಲಿನಲ್ಲಿ ಹಲವು ಅಕ್ರಮಗಳು ಕಂಡು ಬಂದ ಬಳಿಕ ಹಲವು ವರ್ಷ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶ ಸಿಕ್ಕಿರಲಿಲ್ಲ. ಅದಾದ ಬಳಿಕ 2021ರಲ್ಲಿ 103 ಸಜಾ ಬಂಧಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಸನ್ನತಡೆ ಆಧಾರದ ಮೇಲೆ ಬಿಡುಗಡೆ ಸಂಬಂಧ ಸುಪ್ರಿಂಕೋರ್ಟ್ ಮಾರ್ಗಸೂಚಿ ಬಿಡುಗಡೆ ಮಾಡಿದ ಹಿನ್ನೆಲೆ ಕೆಲ ಸನ್ನಡತೆ ಕೈದಿಗಳ ಬಿಡುಗಡೆ ಆಗಿರಲಿಲ್ಲ. ಹೀಗಾಗಿ, ಬಾಕಿ ಉಳಿದಿದ್ದ 89 ಸನ್ನಡತೆ ಸಜಾಬಂಧಿಗಳು ಹಾಗೂ 2021 ಜುಲೈನಲ್ಲಿ ನಡೆದ ಸ್ಥಾಯಿ ಸಲಹಾ ಮಂಡಳಿಯ ಸಮಿತಿ ಪರಿಶೀಲನೆ ಬಳಿಕ ಒಟ್ಟು 161 ಸನ್ನಡತೆ ಸಜಾಬಂಧಿಗಳನ್ನು ಬಿಡುಗಡೆ ಮಾಡಲು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಈ ಪ್ರಸ್ತಾವಕ್ಕೆ ಸಹಿ ಹಾಕಿದ್ದು, ಪ್ರಸಕ್ತ ಸಾಲಿನಲ್ಲಿ 161 ಸನ್ನಡತೆ ಕೈದಿಗಳು ಬಿಡುಗೆಡಯಾಗಲಿದ್ದಾರೆ.

ABOUT THE AUTHOR

...view details