ಕರ್ನಾಟಕ

karnataka

ETV Bharat / state

ಲಾಠಿ ಎತ್ತುವ ಕೈಗಳಲ್ಲಿ ತಯಾರಾಗ್ತಿದೆ ಬಡವರಿಗಾಗಿ ಊಟ... ಎಲ್ಲರಿಂದ ಮೆಚ್ಚುಗೆ

ಸಿಲಿಕಾನ್ ಸಿಟಿಯ ಪೊಲೀಸರು ತಾವು ಗಸ್ತು ತಿರುಗಲು, ಲಾಠಿ ಎತ್ತಲು ಮಾತ್ರ ಅಲ್ಲ, ನಮ್ಮಿಂದಲೂ ಹಸಿದವರಿಗೆ ಆಹಾರ ವಿತರಿಸಲು ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

By

Published : Mar 31, 2020, 4:21 PM IST

Prepare meals for the poor by Silicon City police in bengalore
ಲಾಠಿ ಎತ್ತುವ ಕೈಗಳಲ್ಲಿ ತಯಾರಾಗ್ತಿದೆ ಬಡವರ ಒಪ್ಪತ್ತಿನ ಊಟ

ಬೆಂಗಳೂರು: ಜನರಿಗೆ ಪೊಲೀಸರೆಂದರೆ ಅದೇಕೋ ಭಯ. ಸದಾ ಗಸ್ತು ತಿರುಗುತ್ತಾ, ಸಮಾಜದ ಹಿತಾಕ್ಕಾಗಿ‌ ಕೈಯಲ್ಲಿ ಲಾಠಿ ಎತ್ತುವ ಪೊಲೀಸರು ಸದ್ಯ ಕೋವಿಡ್-19 ವಕ್ಕರಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸರೆಂದರೆ ಭಯಪಡುವ ಜನ ಸದ್ಯದ ಪರಿಸ್ಥಿತಿಯಲ್ಲಿ ಅವರೇ ತಯಾರಿಸಿದ ಆಹಾರ ಸೇವಿಸಿ ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಪ್ಪ ಅನ್ನೋ ಮಾತುಗಳನ್ನ ಹರಸುವಂತಾಗಿದೆ.

ಸಿಲಿಕಾನ್ ಸಿಟಿಯ ಪೊಲೀಸರಿಂದ ಊಟ ತಯಾರಿ
ಹೌದು, ಒಂದೆಡೆ ಸರ್ಕಾರ, ಬಿಬಿಎಂಪಿ, ಕೆಲ ಸಂಘ ಸಂಸ್ಥೆಗಳು ಬಡವರಿಗೆ, ವಿಕಲಚೇತನರಿಗೆ, ಮಕ್ಕಳಿಗೆ, ಮಂಗಳಮುಖಿಯರಿಗೆ, ವೃದ್ಧರಿಗೆ, ಕೂಲಿ ಕಾರ್ಮಿಕರಿಗೆ, ಅನಾಥರಿಗೆ ಊಟ ನೀಡುವ ವ್ಯವಸ್ಥೆ ಮಾಡ್ತಿದ್ರೆ, ಇತ್ತ ಸಿಲಿಕಾನ್ ಸಿಟಿಯ ಪೊಲೀಸರು ನಾವು ಗಸ್ತು ತಿರುಗಲು, ಲಾಠಿ ಎತ್ತಲು ಮಾತ್ರವಲ್ಲ ನಮ್ಮಿಂದಲೂ ಹಸಿದವರಿಗೆ ಆಹಾರ ವಿತರಿಸಲು ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಸಿಲಿಕಾನ್ ಸಿಟಿಯ ಏಳು ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಆಯಾ ವಿಭಾಗದ ಠಾಣೆಯ ಇನ್ಸ್​​​ಪೆಕ್ಟರ್​ ಹಾಗೂ ಸಬ್ ಇನ್ಸ್​​ಪೆಕ್ಟರ್​​ಗಳು ಜವಾಬ್ದಾರಿ ತೆಗೆದುಕೊಂಡು ತಮ್ಮ ಠಾಣೆಯ ಒಂದು ಕೋಣೆ ಅಥವಾ ಠಾಣೆಯ ಹೊರಗಡೆ ಅಡಿಗೆ ರೂಂ ರೆಡಿ ಮಾಡಿಕೊಂಡು ಠಾಣೆಯ ಸುತ್ತಾ ಇರುವ ಬಡ ಜನರಿಗೆ ಆಹಾರ ನೀಡುವ ವ್ಯವಸ್ಥೆ ಮಾಡ್ಕೊಂಡಿದ್ದಾರೆ. ನಿರ್ಗತಿಕರಿಗೆ ಮುಂಜಾನೆ ಟೀ, ಪಲಾವ್, ಅನ್ನ-ಸಾಂಬಾರ್, ಸೊಪ್ಪಿನ ಪಲ್ಯವನ್ನ ಠಾಣೆಯ ಮಹಿಳಾ ಸಿಬ್ಬಂದಿ ತಯಾರಿ ಮಾಡಿ ತೆಗೆದುಕೊಂಡು ಹೋಗಿ ಬಡಿಸುತ್ತಿದ್ದಾರೆ. ಮತ್ತೊಂದೆಡೆ ಶುಚಿತ್ವದ ದೃಷ್ಟಿಯಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಕೆಲಸ ಮಾಡ್ತಿದ್ದಾರೆ.

ABOUT THE AUTHOR

...view details