ಬೆಂಗಳೂರು:ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜನರು ಒಂದೇ ಸ್ಯಾನಿಟೈಸರ್ ಅಥವಾ ಸೋಪ್ ಅನ್ನು ಹಲವರು ಮುಟ್ಟುವುದು ಒಳ್ಳೆಯದಲ್ಲ. ಹೀಗಾಗಿಯೇ ಬೆಂಗಳೂರಿನ 14 ವರ್ಷದ ಬಾಲಕ ಇದಕ್ಕಾಗಿ ನೋ ಟಚ್ ಹ್ಯಾಂಡ್ ಸ್ಯಾನಿಟೈಸರ್ ರೋಬೋಟ್ ಅನ್ನು ಅನ್ವೇಷಣೆ ಮಾಡಿದ್ದಾನೆ.
14 ವರ್ಷದ ಬಾಲಕನಿಂದ ನೋ ಟಚ್ ಹ್ಯಾಂಡ್ ಸ್ಯಾನಿಟೈಸರ್ ರೋಬೋಟ್ ತಯಾರು - ರೋಬೋಟ್ ತಯಾರು
14 ವರ್ಷದ ಕೃಷ್ಣನ್ ಗುಪ್ತಾ, ಲೆಗೊ ಮೈಂಡ್ ಸ್ಟಾರ್ಮ್ ಇವಿ 3 ಬಳಸಿ ನೋ - ಟಚ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. 12 ಸೆಂ.ಮೀ ವ್ಯಾಪ್ತಿಯಲ್ಲಿ ಕೈಗಳು ಬಂದಾಗ ರೋಬೋಟ್ ಗ್ರಹಿಸುತ್ತದೆ. ರೋಬೋಟ್‌ನಲ್ಲಿರುವ ದೊಡ್ಡ ಮೋಟಾರ್ನ ಒಂದು ಭಾಗ ಸ್ಯಾನಿಟೈಸರ್ ಡಬ್ಬಿಯನ್ನು ಕೆಳಕ್ಕೆ ತಳ್ಳುತ್ತದೆ. ಆಗ ಸ್ಯಾನಿಟೈಸರ್ ಲಿಕ್ವಿಡ್ ಹೊರ ಬರಲಿದೆ.
14 ವರ್ಷದ ಕೃಷ್ಣನ್ ಗುಪ್ತಾ, ಇನ್ವೆಂಚರ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೇ ಹಲವು ವರ್ಷಗಳಿಂದ ರೋಬೋಟಿಕ್ ಪ್ರಾಕ್ಟೀಸ್ ಅನ್ನು ಮಾಡುತ್ತಿದ್ದಾರೆ. ಲೆಗೊ ಮೈಂಡ್ ಸ್ಟಾರ್ಮ್ ಇವಿ 3 ಬಳಸಿ ನೋ-ಟಚ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. 12 ಸೆಂ.ಮೀ ವ್ಯಾಪ್ತಿಯಲ್ಲಿ ಕೈಗಳು ಬಂದಾಗ ರೋಬೋಟ್ ಗ್ರಹಿಸುತ್ತದೆ. ರೋಬೋಟ್‌ನಲ್ಲಿರುವ ದೊಡ್ಡ ಮೋಟಾರ್ನ ಒಂದು ಭಾಗ ಸ್ಯಾನಿಟೈಸರ್ ಡಬ್ಬಿಯನ್ನು ಕೆಳಕ್ಕೆ ತಳ್ಳುತ್ತದೆ. ಆಗ ಸ್ಯಾನಿಟೈಸರ್ ಲಿಕ್ವಿಡ್ ಹೊರ ಬರಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷ್ಣಾ ಗುಪ್ತಾ, ಮನೆಯಲ್ಲಿ ಎಲ್ಲರೂ ಒಂದೇ ಸ್ಯಾನಿಟೈಸರ್ ಬಾಟಲಿಯನ್ನು ಸ್ಪರ್ಶಿಸುವುದನ್ನು ನಾನು ಗಮನಿಸಿದ್ದೇನೆ. ಈ ರೀತಿ ಮಾಡುವುದರಿಂದ ಇನ್ನಷ್ಟು ಅನಾರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಯೋಚಿಸಿದೆ. ವಿಶೇಷವಾಗಿ ಆಸ್ಪತ್ರೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಒಂದೇ ಸ್ಯಾನಿಟೈಸರ್ ಅನ್ನು ಹಲವರು ಉಪಯೋಗಿಸುವುದು ಒಳ್ಳೆಯದಲ್ಲ. ಇದಕ್ಕಾಗಿ ಮುಟ್ಟದೇ ಸ್ಯಾನಿಟೈಸರ್ ಬಳಸುವುದು ಹೇಗೆ ಎಂದು ಯೋಚಿಸಿದಾಗ, ರೋಬೋಟ್ ಬಳಸಿ ನೋ ಟಚ್ ಹ್ಯಾಂಡ್ ಸ್ಯಾನಿಟೈಸರ್ ಐಡಿಯಾ ಬಂತು ಎಂದರು.