ಕರ್ನಾಟಕ

karnataka

ETV Bharat / state

ಪದವಿ ಓದಿನ ಜತೆಗೆ‌ ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ.. ಬೆಂಗಳೂರು ವಿವಿ ಅಸ್ತು!! - Bangalore

ಕರ್ನಾಟಕದಲ್ಲಿ‌ ಇದೇ ಮೊದಲ ಬಾರಿಗೆ ಪದವಿ ಪೂರ್ವ ಅಥವಾ ಪದವಿ ಮಟ್ಟದಲ್ಲೇ ತರಬೇತಿ ನೀಡುವುದಾಗಿದೆ. ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಎಂಬ ಡಿಗ್ರಿ ಸ್ಕೂಲಿಗೆ ಬೆಂಗಳೂರು ವಿಶ್ವವಿದ್ಯಾಲಯದ ಅನುಮತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಆರಂಭಿಸಲಾಗಿದೆ.

ಪದವಿ ಓದಿನ ಜೊತೆಗೆ‌ ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ;ಬೆಂಗಳೂರು ವಿವಿ ಅಸ್ತು

By

Published : Jul 14, 2019, 7:57 PM IST

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಈಗಲೂ ಅದೆಷ್ಟೋ ಮಂದಿಗೆ ಕಬ್ಬಿಣದ ಕಡಲೆ. ಸಾಮಾನ್ಯವಾಗಿ ತಮ್ಮ ಇಡೀ ವಿದ್ಯಾಭ್ಯಾಸ ಮುಗಿದ ನಂತರವೇ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸ್ತಾರೆ.ಕೆಲವರು ಇದಕ್ಕಾಗಿ ಇಡೀ ವರ್ಷವನ್ನೇ ಮೀಸಲಿಡುವುದು ಗೊತ್ತಿರುವ ವಿಷಯ. ಇದಕ್ಕಾಗಿ ವಿಶೇಷ ಕೋಚಿಂಗ್ ಸೆಂಟರ್​ಗಳಿಗೆ ಹೋಗುವುದು, ಒಂದು ದಿನದ ಪರೀಕ್ಷೆಗಾಗಿ ವರ್ಷವಿಡೀ ಹಗಲು-ರಾತ್ರಿ ಅಭ್ಯಾಸ ಮಾಡುತ್ತಾರೆ.

ಯುನಿವರ್ಸಲ್ ಕೋಚಿಂಗ್ ಸೆಂಟರ್ ಎಂ ಡಿ ಉಪೇಂದ್ರ ಶೆಟ್ಟಿ

ಆದರೆ, ಪದವಿ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸಿದರೆ ಸಮಯದ ಉಳಿತಾಯದ ಜೊತೆಗೆ ಪರೀಕ್ಷೆ ಎದುರಿಸುವ ಎಲ್ಲ ಸಾಮರ್ಥ್ಯವು ಬರುತ್ತದೆ. ಅರೇ ಪದವಿ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ ಸಾಧ್ಯ ಎನ್ನುವವರಿಗೆ ಉತ್ತರ ಇಲ್ಲಿದೆ. ಬೆಂಗಳೂರಿನ ಯೂನಿವರ್ಸಲ್ ಕೋಚಿಂಗ್ ಸೆಂಟರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಪದವಿ ಓದಿನ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ವಿದ್ಯಾರ್ಥಿಗಳನ್ನ ಸನ್ನದ್ಧಗೊಳಿಸಲು ಮುಂದಾಗಿದೆ.

ಕರ್ನಾಟಕದಲ್ಲಿ‌ ಇದೇ ಮೊದಲ ಬಾರಿಗೆ ಪದವಿ ಪೂರ್ವ ಅಥವಾ ಪದವಿ ಮಟ್ಟದಲ್ಲೇ ತರಬೇತಿ ನೀಡುವುದಾಗಿದೆ. ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಎಂಬ ಡಿಗ್ರಿ ಸ್ಕೂಲಿಗೆ ಬೆಂಗಳೂರು ವಿಶ್ವವಿದ್ಯಾಲಯದ ಅನುಮತಿಯೊಂದಿಗೆ ಆರಂಭಿಸಲಾಗಿದೆ ಅಂತಾರೆ ಯುನಿವರ್ಸಲ್ ಕೋಚಿಂಗ್ ಸೆಂಟರ್ ಎಂ ಡಿ ಉಪೇಂದ್ರ ಶೆಟ್ಟಿ.

ಬೆಳಗ್ಗೆ ಪದವಿ ಓದು-ಮಧ್ಯಾಹ್ನದ ನಂತರ ಐಎಎಸ್, ಕೆಎಎಸ್​ಗೆ ಸಂಬಂಧ ಪಟ್ಟ ತರಬೇತಿ ನೀಡಲಾಗುತ್ತದೆ. ಹರಿಯಾಣ, ಆಂಧ್ರಪ್ರದೇಶ, ನಾರ್ಥ್ ಇಂಡಿಯಾ ಭಾಗಗಳಲ್ಲಿ ಮಾತ್ರ ಈ ಸಿಸ್ಟಂ ಇದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲೂ ಶುರುವಾಗ್ತಿದೆ.

ABOUT THE AUTHOR

...view details