ಬೆಂಗಳೂರು:ಅನ್ಲಾಕ್ 3 ರ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸರ್ಕಾರ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜಿಮ್ ಕೇಂದ್ರಗಳನ್ನು ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಜಿಮ್, ಫಿಟ್ನೆಸ್ ಸೆಂಟರ್ ತೆರೆಯಲು ಗ್ರೀನ್ ಸಿಗ್ನಲ್, ಮಾಲೀಕರಿಂದ ಸಿದ್ಧತೆ - Cleniness work by gym owner
ಲಾಕ್ ಡೌನ್ ಆರಂಭದಿಂದ ಬಂದ್ ಆಗಿರುವ ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳು ಸುಮಾರು 5 ತಿಂಗಳ ಬಳಿಕ ಆಗಸ್ಟ್ 5 ರಿಂದ ಬಾಗಿಲು ತೆರೆಯಲಿವೆ. ಹೀಗಾಗಿ ಜಿಮ್ ಮಾಲೀಕರು ಜಿಮ್ ಕೇಂದ್ರಗಳನ್ನು ತೆರೆಯಲು ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಜಿಮ್ ತೆರೆಯಲು ಮಾಲೀಕರ ಸಿದ್ದ
ಲಾಕ್ ಡೌನ್ ಆರಂಭದಿಂದ ಬಂದ್ ಆಗಿರುವ ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳು ಸುಮಾರು 5 ತಿಂಗಳ ಬಳಿಕ ಆಗಸ್ಟ್ 5 ರಿಂದ ಬಾಗಿಲು ತೆರೆಯಲಿವೆ. ಹೀಗಾಗಿ ಜಿಮ್ ಮಾಲೀಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಈ ವೇಳೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.