ಬೆಂಗಳೂರು:ಕೆಪಿಸಿಸಿಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಯಕ್ರಮದ ಸಿದ್ಧತೆ, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ ಡಿಕೆಶಿ ಜೊತೆಗೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಕೂಡ ಇದ್ದರು. ಕೆಪಿಸಿಸಿ ಹಳೇಯ ಕಚೇರಿ, ಹೊಸ ಕಚೇರಿ ಮತ್ತಿತರ ಭಾಗವನ್ನು ಪರಿಶೀಲಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?, ಕಾರ್ಯಕ್ರಮಕ್ಕೆ ಎಷ್ಟು ಮಂದಿ ಬರ್ತಾರೆ? ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರಾ? ಸ್ಯಾನಿಟೈಸರ್ ಹಾಕಿರುವ ಆಸನಗಳನ್ನು ಅವರು ಖುದ್ದು ಪರಿಶೀಲನೆ ಮಾಡಿದರು.
ನಾಳಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್, ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ನಡೆಯಲಿದೆ. ಸರ್ಕಾರ ಹೊರಡಿಸಿರುವ ಕೊರೊನಾ ಮಾರ್ಗಸೂಚಿಯನ್ನು ಯಾಥವಾತ್ ಆಗಿ ಪಾಲನೆ ಮಾಡುತ್ತೇವೆ. ಸೀಮಿತ ನಾಯಕರಿಗಷ್ಟೇ ಆಹ್ವಾನ ನೀಡಲಾಗಿದೆ. ಕೆಲವರಿಗಷ್ಟೇ ಪಾಸ್ ವಿತರಣೆ ಮಾಡಲಾಗಿದೆ. 150 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಕಾರ್ಯಕರ್ತರು ಕಚೇರಿ ಕಡೆ ಬರದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.