ಬೆಂಗಳೂರು :ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಅಗತ್ಯದ ಹಣಕಾಸು ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿರುವ ಸಭೆಗೆ ಪೂರ್ವಭಾವಿಯಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸಚಿವರು ಸಭೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೂ ಇದು ಸ್ಥಳೀಯ ಸಮಸ್ಯೆಯಾಗಿದೆ. ಈ ಯೋಜನೆಯ ಯಶಸ್ಸು ಅವರಿಗೂ ಅನಿವಾರ್ಯವಾಗಿದೆ.
ಈಗ ಕೃಷ್ಣಾ ಮೇಲ್ದಂಡೆ ಕಾಮಗಾರಿಗೆ ಚುರುಕು ನೀಡದಿದ್ದರೆ, ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭ ಪ್ರತಿಪಕ್ಷಗಳು ಇದೇ ವಿಚಾರವಾಗಿ ಆಡಳಿತ ಪಕ್ಷವನ್ನ ಕಟ್ಟಿ ಹಾಕುವ ಸಾಧ್ಯತೆ ಇರಲಿದೆ. ಹೀಗಾಗಿ, ಅಷ್ಟರೊಳಗೆ ಕಾಮಗಾರಿ ಚುರುಕಾಗಿಸುವುದು ಅನಿವಾರ್ಯ ಎನ್ನಲಾಗ್ತಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ತ್ವರಿತಗೊಳಿಸುವ ವಿಚಾರದಲ್ಲಿ ಸರ್ಕಾರದ ಅವಧಿಯಲ್ಲಿ 10 ಹೆಜ್ಜೆ ಮುಂದುವರಿಯುವ ಕಾರ್ಯ ಮಾಡುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಪರಿಷತ್ನಲ್ಲಿ ಭರವಸೆ ನೀಡಿದ್ದರು. ಈ ಹಿನ್ನೆಲೆ ಇಂದು ಪೂರ್ವಭಾವಿ ಸಭೆ ನಡೆಸಿದ್ದಾರೆ.
ಇದನ್ನು ಓದಿ:Live Video: ಕುಳ್ಳ ವೆಂಕಟೇಶ್ ಭೀಕರ ಹತ್ಯೆ.. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ