ಕರ್ನಾಟಕ

karnataka

ETV Bharat / state

ಏರ್ ಶೋ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಂಡ ಕಮಿಷರ್ ಕಮಲ್ ಪಂತ್ - ಯಲಹಂಕ ವಾಯುನೆಲೆಯಲ್ಲಿ ಏರ್ ಶೋ

ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ 5ರವರೆಗೆ ಏರ್ ಶೋ ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ‌‌.

kamal panth
kamal panth

By

Published : Jan 30, 2021, 6:57 PM IST

ಬೆಂಗಳೂರು:ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋ ಹಿನ್ನೆಲೆಯಲ್ಲಿ ಫೆ.1ರಿಂದ 8ರವರೆಗೆ ಆಗಸದಲ್ಲಿ ವೈಮಾನಿಕ ಹಾರಾಟಕ್ಕೆ ನಿಷೇಧ ಬೆನ್ನಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ‌‌.

ವಿಮಾನ ಹಾರಾಟಕ್ಕೆ ಅಡಚಣೆಯಾಗುವ ಡ್ರೋನ್​ಗಳು, ಪ್ಯಾರಾ ಚೂಟ್, ಮೈಕ್ರೋ ಲೈಟ್ಸ್, ಸಣ್ಣ ಪ್ರಮಾಣದ ಏರ್ ಕ್ರಾಪ್ಟ್, ಬಲೂನ್, ಏರಿಯಲ್ ವೆಹಿಕಲ್ಸ್, ರೊಬೊಟಿಕ್ ಆಟೋಮಷಿನ್​ಗಳಿಗೆ ನಿಷೇಧ‌ ವಿಧಿಸಲಾಗಿದೆ.

ಯಾವುದೇ ರೀತಿಯ ಗಾಳಿಪಟ ಮತ್ತು ಪಾರಿವಾಳ ಹಾರಾಡದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ‌‌. ವೈಮಾನಿಕ ಪ್ರದರ್ಶನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ 15 ದಿನಗಳ ಹಿಂದೆಯೇ ಬಿಬಿಎಂಪಿ ಮಾಂಸ‌ ಮಾರಾಟ ನಿಷೇಧಿಸಿದೆ. ಫೆಬ್ರವರಿ 3ರಿಂದ 5ರವರೆಗೆ ನಡೆಯಲಿರುವ ಏರ್ ಶೋ ನಡೆಯಲಿದೆ.

ABOUT THE AUTHOR

...view details