ಕರ್ನಾಟಕ

karnataka

ETV Bharat / state

ಕುತೂಹಲಕ್ಕೆ ಎಡೆಮಾಡಿಕೊಟ್ಟ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ನಡೆ! - Pratapachandra Shetty returned car

ಹಲವು ರಾಜಕೀಯ ಬೆಳವಣಿಗೆಗಳ ಬಳಿಕ ಬಹುತೇಕ ಪರಿಷತ್‌ ಸಭಾಪತಿ ಸ್ಥಾನದಿಂದ ಪ್ರತಾಪಚಂದ್ರ ಶೆಟ್ಟಿ ಕೆಳಗಿಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ಅವರಿಗೆ ನೀಡಲಾಗಿದ್ದ ಕಾರು ಮತ್ತು ಬಂಗಲೆಯನ್ನು ಹಿಂದಿರುಗಿಸಿದ್ದು ಈಗ ಕುತೂಹಲ ಕೆರಳಿಸಿದೆ.

Pratapachandra Shetty who returned the car and the bungalow
ಪ್ರತಾಪಚಂದ್ರ ಶೆಟ್ಟಿ

By

Published : Dec 22, 2020, 3:11 AM IST

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಂದ ಅವಿಶ್ವಾಸಕ್ಕೊಳಗಾಗಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಮ್ಮ ಸರ್ಕಾರಿ ನಿವಾಸವನ್ನು ತೊರೆದಿದ್ದಾರೆ.

ಇದರ‌ ಜೊತೆಗೆ ಸರ್ಕಾರಿ ಕಾರನ್ನು ವಾಪಾಸು ನೀಡಿದ್ದು, ಸ್ವಕ್ಷೇತ್ರಕ್ಕೆ ತೆರಳಿದ್ದಾರೆ. ಇನ್ನೂ ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅದಕ್ಕೂ ‌ಮೊದಲೇ ಸರ್ಕಾರಿ ನಿವಾಸ ಹಾಗೂ ಕಾರನ್ನು ಹಿಂತಿರುಗಿಸಿರುವುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ :ಮೇಲ್ಮನೆ ಮಲ್ಲಯುದ್ಧ.. ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಸಭಾಪತಿ

ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ‌ಮುಂದಾಗುತ್ತಿದ್ದ ಹಾಗೇ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಡೆದಿದ್ದರು ಎನ್ನಲಾಗಿದೆ. ಬಿಜೆಪಿ ನಾಯಕರು ಸಭಾಪತಿ ಪರ ಸಂಖ್ಯಾಬಲದ ಹಿನ್ನೆಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ರಾಜ್ಯಪಾಲರಿಗೂ ದೂರು ನೀಡಿದ್ದರು. ಇದೀಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಮ್ಮ ಸರ್ಕಾರಿ ನಿವಾಸ ಹಾಗೂ ಸರ್ಕಾರಿ ಕಾರನ್ನು ವಾಪಸು ಮಾಡಿರುವುದು ಕುತೂಹಲ ಕೆರಳಿಸಿದೆ.

ABOUT THE AUTHOR

...view details