ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಕಾಂಗ್ರೆಸ್ ಶಾಸಕರು ಒಬ್ಬೊಬ್ಬರಾಗಿ ರಮೇಶ್ ಜಾರಕಿಹೊಳಿ ನಿವಾಸದ ಕದ ತಟ್ಟಲಾರಂಭಿಸಿದ್ದಾರೆ.
ನಾನು ಯಾವ ಕಾರಣಕ್ಕೂ ಪಕ್ಷ ಬಿಡಲ್ಲ, ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ. ನಾನು ಎಲ್ಲಿಯೂ ಹೋಗಲ್ಲ, ಹೋಗಿಲ್ಲ, ಹೋಗುವುದೂ ಇಲ್ಲ ಅಂದವರೆಲ್ಲಾ ಈಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆವನ್ ಮಿನಿಸ್ಟರ್ ಕ್ವಾಟ್ರಸ್ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಸೆವನ್ ಮಿನಿಸ್ಟರ್ ಕ್ವಾಟ್ರಸ್ ಪ್ರತಾಪ್ ಗೌಡ ಭೇಟಿ
ಇಂದು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ಕೊಟ್ಟು ರಮೇಶ್ ಜಾರಕಿಹೊಳಿ ಜೊತೆ ಚರ್ಚಿಸಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನಿರೀಕ್ಷಿಸಿದ್ದ ಶಾಸಕರು ರಮೇಶ್ ಜತೆ ಚರ್ಚಿಸಿದ್ದಾರೆ. ಇಂದು ದಿನವಿಡೀ ಮನೆಯಿಂದ ಹೊರ ಬಾರದ ರಮೇಶ್ ಜಾರಕಿಹೊಳಿ, ಕೇವಲ ಪ್ರತಾಪ್ ಗೌಡರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.
ನಿನ್ನೆ ಸಂಜೆ ರಮೇಶ್ ಜಾರಕಿಹೊಳಿಯನ್ನ ಭೇಟಿ ಮಾಡಿದ್ದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಮಾತುಕತೆ ನಡೆಸಿ ತೆರಳಿದ್ದರು. ಇನ್ನು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿರುವ ಪ್ರತಾಪ್ ಗೌಡ ಪಾಟೀಲ್ ನಡೆ ಕುತೂಹಲ ಮೂಡಿಸಿದೆ.