ಕರ್ನಾಟಕ

karnataka

ETV Bharat / state

ಜಮೀರ್‌ ಅಹ್ಮದ್‌ ಟಾರ್ಗೇಟ್‌ ಮಾಡಿಲ್ಲ, ಡ್ರಗ್ಸ್‌ ಮಾಫಿಯಾದಲ್ಲಿದ್ದಾರೆಂದು ಹೇಳಿಲ್ಲ-ಸಂಬರಗಿ - ಸಿಸಿಬಿ ವಿಚಾರಣೆ

ನನ್ನ ಬಳಿ ಇದ್ದ ಎಲ್ಲಾ ವಿಡಿಯೋಗಳನ್ನು ನೀಡಿದ್ದು, ಬೇರೆ ಬೇರೆ ವಿಡಿಯೋಗಳ ದಾಖಲಾತಿ ನೀಡುವಂತೆ ಹೇಳಿದ್ದಾರೆ ಎಂದರು. ಶೀಘ್ರದಲ್ಲೇ ಡ್ರಗ್ಸ್ ಮಾಫಿಯಾದಲ್ಲಿರೋ ಇನ್ನು ಕೆಲವರ ಹೆಸರು ಹೊರ ಬರಲಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶೇಕ್ ಫಾಜಿಲ್ ಡ್ರಗ್ಸ್‌ ಮಾಫಿಯಾದಲ್ಲಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ..

Prashanth Sambargi
ಪ್ರಶಾಂತ್ ಸಂಬರಗಿ

By

Published : Sep 12, 2020, 3:55 PM IST

Updated : Sep 12, 2020, 5:15 PM IST

ಬೆಂಗಳೂರು: ದಾಖಲೆ ಸಮರ್ಪಕವಾಗಿಲ್ಲ ಶುಕ್ರವಾರ ಮತ್ತೆ ನೋಟಿಸ್ ಕೊಡ್ತೀವಿ, ದಾಖಲೆ ಸಮೇತ ಮತ್ತೆ ವಿಚಾರಣೆಗೆ ಬನ್ನಿ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದಾರೆ‌.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್​ ಸಂಬರಗಿ

ಸತತ ಮೂರು ಗಂಟೆಗಳ ಕಾಲ ಸಿಸಿಬಿ ವಿಚಾರಣೆ ಮುಗಿಸಿ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಶಾಂತ್ ಸಂಬರಗಿ, ನಾನು ವಿಡಿಯೋಗಳನ್ನು ದಾಖಲೆಗಳಾಗಿ ನೀಡಿದ್ದೇನೆ. ಆದರೆ, ದಾಖಲೆ ಸಮರ್ಪಕವಾಗಿಲ್ಲ, ಮತ್ತೆ ಶುಕ್ರವಾರ ದಾಖಲೆ ಸಮೇತ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ಹೇಳಿದ್ದಾರೆ. ಇಂದು ನಾನು ಕೆಲ ಮಾಹಿತಿ ನೀಡಿದ್ದೇನೆ ಹೊರತು ಸಮರ್ಪಕವಾಗಿ ದಾಖಲೆ ಒದಗಿಸಿಲ್ಲ.

ನನ್ನ ಬಳಿ ಇದ್ದ ಎಲ್ಲಾ ವಿಡಿಯೋಗಳನ್ನು ನೀಡಿದ್ದು, ಬೇರೆ ಬೇರೆ ವಿಡಿಯೋಗಳ ದಾಖಲಾತಿ ನೀಡುವಂತೆ ಹೇಳಿದ್ದಾರೆ ಎಂದರು. ಶೀಘ್ರದಲ್ಲೇ ಡ್ರಗ್ಸ್ ಮಾಫಿಯಾದಲ್ಲಿರೋ ಇನ್ನು ಕೆಲವರ ಹೆಸರು ಹೊರ ಬರಲಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶೇಕ್ ಫಾಜಿಲ್ ಡ್ರಗ್ಸ್‌ ಮಾಫಿಯಾದಲ್ಲಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ಜಮೀರ್ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಹೇಳಿದ್ದೇನೆ ಅಷ್ಟೇ, ನನ್ನ ನೇರ ಟಾರ್ಗೇಟ್ ಜಮೀರ್ ಅಲ್ಲ, ಜಮೀರ್ ಆಪ್ತ ಫಾಜಿಲ್. ಅಲ್ಲದೆ ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ.

ನಾನು ರಾಜಕೀಯ ಉದ್ದೇಶದಿಂದ ಡ್ರಗ್ಸ್‌ ಮುಕ್ತ ಅಭಿಯಾನ ಮಾಡ್ತಿಲ್ಲ. ಅಲ್ಲದೆ ನಾನು ಡ್ರಗ್ಸ್‌ ಮಾಫಿಯಾ ವಿಚಾರದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡ್ತಿಲ್ಲ, ಇಂದು ನಾನು ಸಂಜನಾ ಹಾಗೂ ಯಾವುದೇ ನಟ-ನಟಿಯರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪ್ರಶಾಂತ್ ಸಂಬರಗಿ ಹೇಳಿದರು.

Last Updated : Sep 12, 2020, 5:15 PM IST

ABOUT THE AUTHOR

...view details