ಸಾರಾ ಗೋವಿಂದು ಪ್ರತೀ ಬಾರಿ ನನ್ನ ಟಾರ್ಗೆಟ್ ಮಾಡ್ತಾರೆ. ಅವರು ರೋಲ್ಕಾಲ್ ಗಿರಾಕಿ ಎಂದು ಸಾಮಾಜಿಕ ಕಾರ್ಯಕರ್ತ, ನಿರ್ಮಾಪಕ ಪ್ರಶಾಂತ್ ಸಂಬರಗಿ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಾಣಿಜ್ಯ ಮಂಡಳಿಗೆ, ಕನ್ನಡ ಚಿತ್ರರಂಗಕ್ಕೆ ನನ್ನ ಕೊಡುಗೆ ಏನು ಅಂತ ಪ್ರಶ್ನೆ ಮಾಡಿದ್ದಾರೆ. ನಟ ಆಗಬೇಕೆಂಬ ಆಸೆಯಿಂದ ಇಂಡಸ್ಟ್ರಿಗೆ ಬಂದೆ ನನ್ನ ದುರಾದೃಷ್ಟ ಅವಕಾಶ ಸಿಕ್ಕಿಲ್ಲ. ಆದ್ರೆ ಸುದೀಪ್ ಅವರ ಪರಿಚಯ ಆಯ್ತು ಅವರಿಂದ ಸಾಕಷ್ಟು ಕಲಿತೆ. 2006 ಎಫ್ ಎಮ್ ರೇಡಿಯೋ ಬ್ರಾಂಡ್ ಅಂಬಾಸಿಡರ್ ಆಗಿ ಉಪ್ಪಿ ಅವರನ್ನ ಅಯ್ಕೆ ಮಾಡಿದೆ. ನನ್ನ ಗೆಳೆಯ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯ ಚಿತ್ರಕ್ಕೆ ನಾನು ಪಾಲುದಾರನಾಗಿದ್ದೆ, ಅಲ್ಲದೆ ವಿತರಣೆಯನ್ನು ಮಾಡಿದ್ದೇನೆ.
ಅಲ್ಲದೆ ಆಡಿಯೋ ಕ್ಷೇತ್ರದಲ್ಲಿ ರಿಂಗ್ಟೋನ್ ಎಂಬ ರೆವಲ್ಯೂಶನ್ ಮಾಡಿದ್ದೇ ಪ್ರಶಾಂತ್ ಸಂಬರಗಿ. ಜೊತೆಗೆ ಕನ್ನಡ ಮತ್ತು ತೆಲುಗು ಚಿತ್ರಗಳ ವಿತರಣೆ ಮಾಡಿದ್ದೇನೆ. ನಾನು ಈಗಲೂ ವಾಣಿಜ್ಯ ಮಂಡಳಿ ಸದಸ್ಯ ಆಗಿಲ್ಲ ಮುಂದೆಯೂ ಆಗಲ್ಲ ಎಂದರು.
ಸಾರ ಗೋವಿಂದು ನನ್ನ ಮೇಲೆ ಪ್ರತೀ ಬಾರಿ ಆರೋಪ ಮಾಡ್ತಾರೆ. ಬಾಹುಬಲಿ 2 ಚಿತ್ರ ರಿಲೀಸ್ ಮಾಡದಂತೆ ಪ್ರತಿಭಟನೆ ಮಾಡಿದ್ದು ಯಾರು. ಬಾಹುಬಲಿ 2 ಚಿತ್ರದ ರಿಲೀಸ್ ವಿಚಾರದಲ್ಲಿ ನನಗೂ ಅವರಿಗೂ ಮನಸ್ತಾಪ ಉಂಟಾಯಿತು. ಆ ಸಮಯದಲ್ಲಿ ನನ್ನ ಮೇಲೆ ಸಾರ ಗೋವಿಂದು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ಹಾಕಿದ್ರು. ಫಿಲ್ಮ್ ಚೇಂಬರ್ ಸಿನಿಮಾ ಬಿಟ್ಟು ಬೇರೆ ಯಾವುದೇ ಬ್ಯುಸಿನೆಸ್ ಮಾಡಲ್ವ. ಆಡಿಯೋ ಸಂಸ್ಥೆಗಳಿಗೆ ರಿಂಗ್ ಟೋನ್ನಿಂದ ಹಣ ಬರುವಂತೆ ಮಾಡಿದ್ದೇ ನಾನು ಎಂದು ಹೇಳಿದ್ದಾರೆ.
ಇನ್ನು ಫಿಲ್ಮ್ ಚೇಂಬರ್ನಲ್ಲಿ ಅವ್ಯವಹಾರ ಇಲ್ವಾ. ಕೊರೊನಾ ಲಾಕ್ಡೌನ್ ವೇಳೆ ಸರ್ಕಾರ ನೀಡಿದ್ದ, ಕಾರ್ಮಿಕರಿಗೆ ಸೇರಿದ ದಿನಸಿ ಕಿಟ್ಗಳನ್ನು ಚೇಂಬರ್ ಪದಾಧಿಕಾರಿಗಳು ತೆಗೆದುಕೊಂಡರು. ಪ್ರತಿ ಬಾರಿ ಸಾರಾ ಗೋವಿಂದ್ ಆ್ಯಂಡ್ ಟೀಂ ನನ್ನ ಟಾರ್ಗೆಟ್ ಮಾಡ್ತಾರೆ. ಚೇಂಬರ್ ಹೆಸರಲ್ಲಿ ಚಿತ್ರರಂಗದಲ್ಲಿ ರೂಲ್ ಮಾಡಬಾರದು. ಚೇಂಬರ್ ಅಲ್ಲಿ 15 ಲಕ್ಷದ ಟಾಯ್ಲೆಟ್ ಕಟ್ಟಿಸಿದ್ದಾರೆ, ಅದರ ತನಿಖೆ ಆಗಿದ್ಯಾ. ಡಬ್ಬಿಂಗ್ ಸಿನಿಮಾಗಳು ಇಪ್ಪತ್ತು ವರ್ಷಗಳ ಹಿಂದೆಯೇ ಬರಬೇಕಿತ್ತು. ಸಾರಾಗೊವಿಂದು ಅವರ ಧೋರಣೆಯಿಂದ ವೈಯಕ್ತಿಕ ಹಿತಾಸಕ್ತಿ ಅಷ್ಟೇ ಎಂದರು.
ಚಿತ್ರರಂಗಕ್ಕೆ ನನ್ನ ಕೊಡುಗೆ ಏನು ಅಂತ ಕೇಳುವ ಸಾರಾ ಗೋವಿಂದು ಆ್ಯಂಡ್ ಟೀಂ, ಬಾಹುಬಲಿ 2 ಚಿತ್ರ ರಿಲೀಸ್ ವೇಳೆ ರೋಲ್ ಕಾಲ್ ಮಾಡುವ ಸಲುವಾಗಿ ಕ್ಯಾತೆ ತೆಗೆದರು. ಅವರು ರೋಲ್ ಕಾಲ್ ಗಿರಾಕಿಗಳು ಎಂದು ಪ್ರಶಾಂತ್ ಸಂಬರಗಿ ಸಾರಾ ಗೋವಿಂದ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.