ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್ ಡ್ರಗ್ ಕೇಸ್; ಸಿಎಂಗೆ ದಾಖಲೆ ನೀಡಲು ವಿಧಾನಸೌಧಕ್ಕೆ ಬಂದ ಪ್ರಶಾಂತ್ ಸಂಬರಗಿ - Bangaluru Latest News

ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ ಕೆಲವರು ಭಾಗಿಯಾಗಿರುವ ಮಾಹಿತಿ ಬಹಿರಂಗಪಡಿಸುವ ಸಂಚಲನ ಮೂಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

Prashant Sambaragi who came to the Vidhana Soudha
ಸಿಎಂಗೆ ದಾಖಲೆ ನೀಡಲು ವಿಧಾನಸೌಧಕ್ಕೆ ಬಂದ ಪ್ರಶಾಂತ್ ಸಂಬರಗಿ

By

Published : Sep 22, 2020, 5:57 PM IST

Updated : Sep 22, 2020, 6:46 PM IST

ಬೆಂಗಳೂರು: ಡ್ರಗ್ಸ್ ಮಾಫಿಯಾ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ತಮ್ಮಲ್ಲಿರುವ ದಾಖಲೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲು ಇಂದು ವಿಧಾನಸೌಧಕ್ಕೆ ಆಗಮಿಸಿದ್ದರು.

ಡ್ರಗ್ಸ್ ಮಾಫಿಯಾ ಕುರಿತು ಚರ್ಚೆ ನಡೆಸಲು ಭೇಟಿಗೆ ಅವಕಾಶ ನೀಡುವಂತೆ ಪ್ರಶಾಂತ್ ಸಂಬರಗಿ ಮಾಡಿದ್ದ ಮನವಿ ಪುರಸ್ಕರಿಸಿರುವ ಸಿಎಂ ಸಂಜೆ 5 ಗಂಟೆಗೆ ಸಮಯಾವಕಾಶ ನೀಡಿದ್ದರು. ಸಿಎಂ ಅನುಮತಿ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ಡ್ರಗ್ಸ್ ಪ್ರಕರಣದ ದಾಖಲೆಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಸಿಎಂ ಭೇಟಿಗೂ ಮುನ್ನ ಈ ಕುರಿತು ಮಾತನಾಡಿರುವ ಪ್ರಶಾಂತ್ ಸಂಬರಗಿ, ಮುಖ್ಯಮಂತ್ರಿಗಳು ಭೇಟಿಗೆ ಸಮಯಾವಕಾಶ ಕೊಟ್ಟಿದ್ದಾರೆ. ಹಾಗಾಗಿ ಬಂದಿದ್ದೇನೆ, ಅವರಿಗೆ ಕೆಲವೊಂದು ಮಾಹಿತಿ ಹೇಳುವುದಿದೆ, ಅದೆಲ್ಲವನ್ನೂ ತಿಳಿಸಬೇಕು, ಡ್ರಗ್ಸ್ ಪ್ರಕರಣದ ಆಗುಹೋಗುಗಳ ಸಂಗತಿಗಳು, ಡ್ರಗ್ಸ್ ಮಾಫಿಯಾ ಬಗ್ಗೆ ಹಲವು ಮಾಹಿತಿಯನ್ನು ಸಿಎಂ ಅವರಿಗೆ ಕೊಡಬೇಕು ಎಂದು ಬಂದಿದ್ದೇನೆ, ಖುದ್ದಾಗಿ ಸಿಎಂ ಅವರ ಅನುಮತಿ ಸಿಕ್ಕಿದ್ದು, ಅವರಿಗೆ ದಾಖಲಾತಿಗಳನ್ನು ಒದಗಿಸಲಾಗುತ್ತದೆ ಎಂದರು.

ಸಿಎಂಗೆ ದಾಖಲೆ ನೀಡಲು ವಿಧಾನಸೌಧಕ್ಕೆ ಬಂದ ಪ್ರಶಾಂತ್ ಸಂಬರಗಿ

ಯಾರ ವಿರುದ್ಧ ದೂರು ನೀಡಲು ಬಂದಿಲ್ಲ. ಕೇವಲ ಮಾಹಿತಿ ಕೊಡಲು ಬಂದಿದ್ದೇನೆ. ಸಾಮಾಜಿಕ ಹೋರಾಟ ಮಾಡುತ್ತಿದ್ದೇನೆ, ಯಾರು ಯಾರಿಗೆ ವಿಷಯ ತಿಳಿಸಬೇಕೋ ತಿಳಿಸುತ್ತಿದ್ದೇನೆ ಎಂದರು.

Last Updated : Sep 22, 2020, 6:46 PM IST

ABOUT THE AUTHOR

...view details