ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕಚೇರಿ ಆರಂಭಿಸಿ ಅಧಿಕೃತ ಪ್ರಚಾರ ಆರಂಭಿಸಿದ ಪ್ರಕಾಶ್​ ರೈ - ಅಧಿಕೃತ ಕಚೇರಿ

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಪ್ರಕಾಶ್ ರೈ ಚುನಾವಣಾ ಪ್ರಚಾರ ಆರಂಭ ಮಾಡಿದ್ದು, ಈಗಾಗಲೇ ತಮ್ಮನ್ನು ಬೆಂಬಲಿಸುವಂತೆ ವಿವಿಧ ಸಂಘಟನೆಗಳು, ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ಪ್ರಕಾಶ್ ರಾಜ್

By

Published : Mar 18, 2019, 9:10 AM IST

ಬೆಂಗಳೂರು: ಇಲ್ಲಿನ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ ರೈ ಭಾನುವಾರದಂದು ಮಾಗಡಿ ರಸ್ತೆಯಲ್ಲಿ ತಮ್ಮ ಪ್ರಚಾರದ ಕಚೇರಿ ಉದ್ಘಾಟಿಸಿದರು.

ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಮೂಲಕ ಚುನಾವಣೆಯ ಪ್ರಚಾರ ಕಾರ್ಯ ಹಾಗೂ ಕಚೇರಿ ಉದ್ಘಾಟನೆ ಎರಡೂ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಪ್ರಕಾಶ್ ರೈ ಚುನಾವಣಾ ಪ್ರಚಾರ ಆರಂಭ ಮಾಡಿದ್ದು, ಈಗಾಗಲೇ ತಮ್ಮನ್ನು ಬೆಂಬಲಿಸುವಂತೆ ವಿವಿಧ ಸಂಘಟನೆಗಳು, ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ ಕಚೇರಿ ಆರಂಭಿಸಿದ ಪ್ರಕಾಶ್​ ರೈ

ರಾಜ್ಯ ಸರ್ಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‍ ಹಾಗೂ ಜೆಡಿಎಸ್‍ ಎರಡೂ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಆದರೆ ಇದುವರೆಗೂ ಎರಡೂ ಪಕ್ಷದ ಮುಖಂಡರಿಂದ ಯಾವುದೇ ಭರವಸೆ ಸಿಕ್ಕಿಲ್ಲ.

ಮಾಗಡಿ ರಸ್ತೆಯ ಗಾಂಧಿ ನಗರದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ ವೇಳೆ ಪ್ರಕಾಶ್‍ ರೈಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಾಥ್​ ನೀಡಿದ್ದಾರೆ.

ABOUT THE AUTHOR

...view details