ಕರ್ನಾಟಕ

karnataka

ETV Bharat / state

ಪ್ರಜ್ವಲ್ ರಾಜೀನಾಮೆ ಹೇಳಿಕೆ ಕೇವಲ ನಾಟಕ: ಬಿ ಜೆ ಪುಟ್ಟಸ್ವಾಮಿ -

ಹಾಸನ ಸಂಸದ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವುದಾಗಿ ಹೇಳಿರೋದು ಕೇವಲ ನಾಟಕ‌. ಇದು ನಂಬುವ ವಿಚಾರ ಅಲ್ಲವೆಂದು ಎಂಎಲ್​ಸಿ ಬಿ.ಜೆ ಪುಟ್ಟಸ್ವಾಮಿ ಟೀಕಿಸಿದ್ದಾರೆ.

ಪ್ರಜ್ವಲ್ ರಾಜೀನಾಮೆ ಕೇವಲ ನಾಟಕ

By

Published : May 24, 2019, 12:50 PM IST

ಬೆಂಗಳೂರು: ಹಾಸನ ನೂತನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಎಂಎಲ್​ಸಿ ಬಿ. ಜೆ ಪುಟ್ಟಸ್ವಾಮಿ ಅವರು ಇದು ಬರೀ ನಾಟಕವೆಂದುಟೀಕಿಸಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಜ್ವಲ್​ ಒಂದು ವೇಳೆ ರಾಜೀನಾಮೆ ಕೊಟ್ಟರೆ ಖಂಡಿತವಾಗಿಯೂ ನಾವು ಇನ್ನೊಂದು ಸೀಟು ಹೆಚ್ಚು ಗೆಲ್ಲುತ್ತೇವೆ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಲು ಮುಂದಾದ ವಿಚಾರ ರಾಜ್ಯದ ಜನತೆಗೆ ಮರಳು ಮಾಡುವ ತಂತ್ರ ಅಷ್ಟೇ. ತಮ್ಮ ಇಬ್ಬರು ಮಕ್ಕಳನ್ನ ಬಿಟ್ಟು ಕುಟುಂಬದಲ್ಲಿ ಮತ್ಯಾರೂ ರಾಜಕೀಯಕ್ಕೆ ಬರಲ್ಲವೆಂದು ದೇವೇಗೌಡರು ಹೇಳಿದ್ದರು. ಆದರೆ ನಂತರದಲ್ಲಿ ಸೊಸೆಯಂದಿರು, ಮೊಮ್ಮಕ್ಕಳು, ಎಲ್ಲರನ್ನೂ ರಾಜಕೀಯಕ್ಕೆ ಕರೆತಂದರು. ಆಗ ಅವರ ಉದ್ದೇಶ ಜನರಿಗೆ ತಿಳಿಯಿತು. ಹೀಗಾಗಿ ದೇವೇಗೌಡರನ್ನು ಯಾರು ಉತ್ತುಂಗಕ್ಕೆ ತಂದಿದ್ರೋ ಇಂದು ಅವರೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಪುಟ್ಟಸ್ವಾಮಿ ಗೇಲಿ ಮಾಡಿದ್ದಾರೆ.

ಪ್ರಜ್ವಲ್ ರಾಜೀನಾಮೆ ಕೇವಲ ನಾಟಕವೆಂದ ಪುಟ್ಟಸ್ವಾಮಿ

ತಮ್ಮ ಮೊಮ್ಮಗನಿಗೆ ಅಂತಲೇ ದೇವೇಗೌಡರು ಹಾಸನ ಬಿಟ್ಟುಕೊಟ್ರು ಅಂತಾ ಬಿ ಜೆ ಪಟ್ಟಸ್ವಾಮಿ ಹೇಳಿದ್ರು.

For All Latest Updates

TAGGED:

ABOUT THE AUTHOR

...view details