ಬೆಂಗಳೂರು :ಇಲ್ಲಿನನಾಗವಾರ ಸರ್ಕಲ್ ಬಳಿಯ ರಸ್ತೆ ಬದಿ ಬಳಸಿರುವ ಪಿಪಿಇ ಕಿಟ್ಗಳನ್ನು ಎಸೆಯಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ ; ರಸ್ತೆ ಮೇಲೆ ಪಿಪಿಇ ಕಿಟ್‌ಗಳು - bangalore nagavara circle news
ಕೊರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುರಕ್ಷತೆ ಕಾಪಾಡಬೇಕಾದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನ ತೋರಿ ಬೇಕಾಬಿಟ್ಟಿಯಾಗಿ ಬಳಕೆಯಾದ ಪಿಪಿಕಿಟ್‌ಗಳನ್ನು ಎಸೆದಿರುವುದು ಸ್ಥಳೀಯರ ಆಕ್ರೋಶ..
ರಸ್ತೆ ಮೇಲೆ ಪಿಪಿಇ ಕಿಟ್ ಎಸೆದು ವಿಕೃತಿ
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ರಾಜಧಾನಿಯಲ್ಲಿ ಪ್ರತಿದಿನ ಈ ರೀತಿ ಪ್ರಕರಣ ಬೆಳಕಿಗೆ ಬರುತ್ತಿವೆ. ಮೊನ್ನೆಯಷ್ಟೇ ಕೆಆರ್‌ಪುರಂನ ಓಲ್ಡ್ ಮದ್ರಾಸ್ ರೋಡ್ನಲ್ಲಿ ಬಳಸಿದ್ದ ಪಿಪಿಇ ಕಿಟ್‌ಗಳು ಪತ್ತೆಯಾಗಿದ್ದವು. ಇದೀಗ ಟಿನ್ ಫ್ಯಾಕ್ಟರಿ ಹಾಗೂ ನಾಗವಾರ ಬಳಿ ಕಿಟ್‌ಗಳು ಕಂಡು ಬಂದಿವೆ.
ಕೊರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುರಕ್ಷತೆ ಕಾಪಾಡಬೇಕಾದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನ ತೋರಿ ಬೇಕಾಬಿಟ್ಟಿಯಾಗಿ ಬಳಕೆಯಾದ ಪಿಪಿಕಿಟ್‌ಗಳನ್ನು ಎಸೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.