ಕರ್ನಾಟಕ

karnataka

ETV Bharat / state

ಕೊರೊನಾ ಮಹಾಮಾರಿಯಿಂದ ಆರಕ್ಷಕರ ರಕ್ಷಣೆಗೆ ಪಿಪಿಇ ಕಿಟ್​​ - ppe kit for corona worriors latest news

ಕೊರೊನಾ ವಾರಿಯರ್​ ಆಗಿ ಕೆಲಸ ನಿರ್ವಹಿಸ್ತಿರೊ ಪೊಲೀಸ್​ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಪೊಲೀಸರಿಗೂ ಪಿಪಿಇ ಕಿಟ್​ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ppe kit for police
ಪೊಲೀಸರಿಗೂ ಪಿಪಿಇ ಕಿಟ್​​

By

Published : May 20, 2020, 5:55 PM IST

ಬೆಂಗಳೂರು: ಕೊರೊನಾ‌ ವಾರಿಯರ್ ಆಗಿ ನಿರಂತರ ಜನರ ಸಂಪರ್ಕದಲ್ಲಿರುವ ಪೊಲೀಸ್​ ಸಿಬ್ಬಂದಿಗೆ ಪಿಪಿಇ ಕಿಟ್​​ ನೀಡಲಾಗುತ್ತಿದೆ.

ಪೊಲೀಸರಿಗೂ ಪಿಪಿಇ ಕಿಟ್​​

ಪೊಲೀಸರಿಗೂ ಸೋಂಕು‌ ತಗುಲುವ ಭೀತಿ ಪೊಲೀಸ್ ಇಲಾಖೆಯಲ್ಲಿ ಕೂಡ ನಿರ್ಮಾಣವಾಗಿದೆ. ಹೀಗಾಗಿ ಕಂಟೇನ್ಮೆಂಟ್​​ , ಸೀಲ್​ಡೌನ್​​​​​, ಚೆಕ್​​​​​​ಪೋಸ್ಟ್‌, ಆಸ್ಪತ್ರೆ, ಬಸ್​​​​ ನಿಲ್ದಾಣ , ರಸ್ತೆಗಳ ಬಳಿ ಕಾರ್ಯನಿರ್ವಹಣೆ ಮಾಡುವ ಪೊಲೀಸ್ ಸಿಬ್ಬಂದಿ ತಮಗೆಲ್ಲಿ ಕೊರೊನಾ ಅನ್ನೋ ಮಹಾಮಾರಿ ಅಂಟಿ ಬಿಡುತ್ತೋ ಅನ್ನೋ ಭಯದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ‌ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಪಿಪಿಇ ಕಿಟ್ ನೀಡುವಂತೆ ಸೂಚನೆ ನೀಡಿದ್ದಾರೆ.

ಡಿಜಿ ಆದೇಶದಂತೆ ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರದಲ್ಲಿ ಹೆಚ್ಚುವರಿ ಆಯುಕ್ತರುಗಳು ಹಾಗೂ ಡಿಸಿಪಿ‌ ಜೊತೆ ಸಭೆ ನಡೆಸಿದ್ದಾರೆ. ಇತ್ತ ಜಿಲ್ಲೆಯಲ್ಲಿ‌ ಐಜಿಪಿಗಳು ಎಸ್ಪಿಗಳ ಜೊತೆ ಸಭೆ ನಡೆಸಿ‌ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪಿಪಿಐ ಕಿಟ್ ವಿತರಣೆಗೆ ಮುಂದಾಗಿದ್ದಾರೆ.

ಸದ್ಯ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸುಮಾರು‌ 95 - ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸ್ತಿದ್ದು , ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸ್ತಿರೋ ಪ್ರತಿಯೊಬ್ಬ ಸಿಬ್ಬಂದಿಗೆ ಈ‌ ಕಿಟ್ ವಿತರಣೆ ಮಾಡಲಾಗುತ್ತದೆ. ಸೋಂಕಿತರ ಬಳಿಗೆ ಬಿಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳ ಜೊತೆಗೆ ತೆರಳಿ‌‌ ಕ್ವಾರಂಟೈನ್​ಗೆ ಭದ್ರತೆ ನೀಡುವ ಹಿನ್ನೆಲೆ, ಪ್ರತಿ ಠಾಣೆಗಳಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಎಕ್ಯೂಪ್​ಮೆಂಟ್​ ಬಳಕೆ ಕಡ್ಡಾಯವಾಗಿದೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ 44 ಟ್ರಾಫಿಕ್ ಪೊಲೀಸ್ ಠಾಣೆ , 108 ಕ್ರೈಂ ಸ್ಟೇಷನ್ ಇದ್ದು ಕೊರೊನಾ ವಾರಿಯರ್ ಆಗಿ ಕೆಲಸ‌ ಮಾಡುವವರಿಗೆ ಈ ಕಿಟ್ ನೀಡಲು ನಿರ್ಧರಿಸಲಾಗಿದೆ.

ABOUT THE AUTHOR

...view details