ಕರ್ನಾಟಕ

karnataka

ETV Bharat / state

ಪಿಪಿಇ ಕಿಟ್​​​ ಕೊಳ್ಳುವ ನೆಪದಲ್ಲಿ ಆನ್​​​ಲೈನ್​ ಮೂಲಕ ಹಣ ಎಗರಿಸಿದ ಖದೀಮರು!!

ಪಿಪಿಇ‌ ಉತ್ಪಾದನೆ ಮಾಡುವ ಕಂಪನಿಯನ್ನು‌ ಗುರಿಯಾಗಿಸಿ ವಂಚಕರು ಕಂಪನಿ ಮಾಲೀಕ ಬೈರೇಶ್ ಎಂಬುವರಿಗೆ ಕರೆ ಮಾಡಿ ಆರ್ಮಿ ಅಧಿಕಾರಿಗಳು ಎಂದು ಪರಿಚಯಿಸಿ ನಮಗೆ‌ ಅರ್ಜೆಂಟಾಗಿ 200ಕ್ಕಿಂತ ಹೆಚ್ಚು ಪಿಪಿಇ ಕಿಟ್ ಬೇಕಿದೆ ಎಂದು‌ ಆರ್ಡರ್ ಮಾಡಿದ್ದಾರೆ..

By

Published : Jul 1, 2020, 4:56 PM IST

ppe kit company owner got fraud by online thief
ಪಿಪಿಇ ಕಿಟ್​​​ ಕೊಳ್ಳುವ ನೆಪದಲ್ಲಿ ಆನ್​​​ಲೈನ್​ ಮೂಲಕ ಹಣ ಎಗರಿಸಿದ ಖದೀಮರು

ಬೆಂಗಳೂರು :ಪಿಪಿಇ ಕಿಟ್ ಆರ್ಡರ್ ಮಾಡುವ ಗ್ರಾಹಕರ ಸೋಗಿನಲ್ಲಿ‌ ಆನ್​ಲೈನ್ ಖದೀಮರು ಕಂಪನಿಯೊಂದರ ಮಾಲೀಕರಿಗೆ ಸಾವಿರಾರು ರೂಪಾಯಿ ಟೋಪಿ ಹಾಕಿರೋ ಘಟನೆ ನಗರದಲ್ಲಿ ನಡೆದಿದೆ. ಪಿಪಿಇ‌ ಉತ್ಪಾದನೆ ಮಾಡುವ ಕಂಪನಿಯನ್ನು‌ ಗುರಿಯಾಗಿಸಿ ವಂಚಕರು ಕಂಪನಿ ಮಾಲೀಕ ಬೈರೇಶ್ ಎಂಬುವರಿಗೆ ಕರೆ ಮಾಡಿ ಆರ್ಮಿ ಅಧಿಕಾರಿಗಳು ಎಂದು ಪರಿಚಯಿಸಿ ನಮಗೆ‌ ಅರ್ಜೆಂಟಾಗಿ 200ಕ್ಕಿಂತ ಹೆಚ್ಚು ಪಿಪಿಇ ಕಿಟ್ ಬೇಕಿದೆ ಎಂದು‌ ಆರ್ಡರ್ ಮಾಡಿದ್ದಾರೆ.

ಹಣವನ್ನು ಆನ್​ಲೈನ್ ಮೂಲಕ ಭರಿಸುವುದಾಗಿ‌ ಭರವಸೆ ನೀಡಿದ್ದಾರೆ. ಮಾಲೀಕರ ಮೊಬೈಲ್​​ನಲ್ಲಿ ಗೂಗಲ್‌ ಪೇ ಇರದ ಕಾರಣ ಸಹೋದರ ಮಂಜುನಾಥ್ ಎಂಬುವರ ನಂಬರ್ ಕೊಟ್ಟು ಹಣ ಕಳುಹಿಸುವಂತೆ ವಂಚಕರಿಗೆ ಹೇಳಿದ್ದಾರೆ. ಇದರಂತೆ ವಾಟ್ಸ್‌ಆ್ಯಪ್ ಕರೆ ಮಾಡಿ ಮೊದಲಿಗೆ 5 ರೂ. ಕಳುಹಿಸುತ್ತಿದ್ದು‌ ನಿಮ್ಮ ಮೊಬೈಲ್​ಗೆ ಕೂಪನ್ ಬರಲಿದೆ. ಅದನ್ನು‌ ಒತ್ತಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಹಣ ಟ್ರ್ಯಾನ್ಸ್​​ಫರ್ ಆಗಲಿದೆ ಎಂದು ಖದೀಮರು ಹುಸಿ ಭರವಸೆ ನೀಡಿದ್ದಾರೆ.‌

ಇದರಂತೆ ಮಂಜುನಾಥ್, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ವಂಚಕರು ಹಂತ ಹಂತವಾಗಿ 16 ಸಾವಿರ ರೂಪಾಯಿ ಎಗರಿಸಿದ್ದಾರೆ. ಹಣ ಕಳೆದುಕೊಂಡ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ‌ಈ ಸಂಬಂಧ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ದೂರು ನೀಡಿದ್ದಾರೆ.

ABOUT THE AUTHOR

...view details