ಬೆಂಗಳೂರು:ಅಪ್ಪು ಈ ಹೆಸರಲ್ಲೇ ಪವರ್ ಇದೆ, ವಯಸ್ಸು 40 ದಾಟಿದ್ರು ಪಾದರಸದಂತೆ ಲವಲವಿಕೆಯಿಂದಿರುವ ಪುನೀತ್ ರಾಜ್ ಕುಮಾರ್ ಗೆ ಪುನೀತ್ ರಾಜ್ ಕುಮಾರ್ ಅವರೇ ಸಾಟೀ. ಜಿಮ್ ,ಡಯಟ್ ಮಾಡಿ ಫಿಟ್ ಆಗಿರೋ ಅಪ್ಪುಯಾವಾಗಲು ಸಖತ್ ಆಕ್ಟೀವ್ ಆಗಿರ್ತಾರೆ.ಯುವಕರು ನಾಚುವಂತೆ ಎನರ್ಜಿಟಿಕ್ ಆಗಿರುವ ದೊಡ್ಮನೆ ರಾಜಕುಮಾರ, ಇತ್ತೀಚೆಗೆ ಮೈಸೂರಿನಲ್ಲಿ "ಯುವರತ್ನ" ಶೂಟಿಂಗ್ ನಡೆಯುತ್ತಿದ್ದ ಫ್ರೀ ಟೈಂ ನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಂದು ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಅಪ್ಪುಗೆ ಅಪ್ಪುನೇ ಸಾಟಿ ಈ ವಿಡಿಯೋ ನೋಡಿ ನೀವೇ ಹೇಳ್ತಿರಾ... - ಪುನೀತ್ ರಾಜ್ ಕುಮಾರ್
ಅಪ್ಪುಈ ಹೆಸರಲ್ಲೇ ಪವರ್ ಇದೆ. ವಯಸ್ಸು 40 ದಾಟಿದ್ರು ಪಾದರಸದಂತೆ ಲವಲವಿಕೆಯಿಂದಿರುವ ಪುನೀತ್ ರಾಜ್ ಕುಮಾರ್ ಗೆ ಪುನೀತ್ ರಾಜ್ ಕುಮಾರೆ ಸಾಟೀ. ಜಿಮ್ ,ಡಯಟ್ ಮಾಡಿ ಫಿಟ್ ಆಗಿರೋ ಅಪ್ಪುಯಾವಾಗಲು ಸಖತ್ ಆಕ್ಟೀವ್ ಆಗಿರ್ತಾರೆ. ಇತ್ತೀಚೆಗೆ ಮೈಸೂರಿನಲ್ಲಿ "ಯುವರತ್ನ" ಶೂಟಿಂಗ್ ನಡೆಯುತ್ತಿದ್ದಾ ಫ್ರೀ ಟೈಂ ನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಂದು ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪುನೀತ್ ರಾಜ್ ಕುಮಾರ್
ಸರಸರನೆ ಕ್ಷಮಾತ್ರದಲ್ಲಿ ಸುಮಾರು 12 ಅಡಿಗೂ ಹೆಚ್ಚು ಎತ್ತರ ವಿರುವ ಕಬ್ಬಿಣದ ಕಂಬವನ್ನೇರಿದ್ದಾರೆ. ಇನ್ನೂ ಪವರ್ ಸ್ಟಾರ್ ಸ್ಟಂಟ್ ನೋಡಿದ್ರೆ ಅಪ್ಪು ಮಲ್ಲಕಂಬ ಸಾಹಸ ವೇನಾದ್ರು ಕಲ್ತಿದ್ದಾರಾ ಅನ್ನುವಷ್ಟರ ಮಟ್ಟಕ್ಕೆ ಕಂಬವನ್ನೇರಿದ್ದಾರೆ.
ಇನ್ನೂ ಅಪ್ಪು ಕಂಬವನ್ನೇರಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ದೊಡ್ಮನೇ ರಾಜಕುಮಾರನ ಸ್ಟಂಟ್ ಗೆ ಆಭಿಮಾನಿ ದೇವರುಗಳು ಉಘೇ ಅಂತಿದ್ದಾರೆ.