ಕರ್ನಾಟಕ

karnataka

ETV Bharat / state

'ಕಿಸ್' ಸಿನಿಮಾದಲ್ಲಿ ಪವರ್ ಸ್ಟಾರ್ ಬೊಂಬಾಟ್ ಗಾನ ಬಜಾನ! - ಪವರ್ ಸ್ಟಾರ್ ಬೊಂಬಾಟ್ ಗಾನ ಬಜಾನ

'ಕಿಸ್' ಸಿನಿಮಾದಲ್ಲಿ ಬೆಟ್ಟೆಗೌಡ v/s ಚಿಕ್ಕಬೋರಮ್ಮ... ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹಾಡಿದ್ದು ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ.

ಕಿಸ್ ಸಿನಿಮಾಕ್ಕೆ ಹಾಡಿದ ಪವರ್ ಸ್ಟಾರ್

By

Published : Jul 27, 2019, 10:50 PM IST

ಬೆಂಗಳೂರು:ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ದೇಶನವೊಂದನ್ನು ಬಿಟ್ಟು ನಟನೆ, ಸಿಂಗಿಂಗ್ ನಿರ್ಮಾಣ ಅಂತಾ ತನ್ನನ್ನು ತೊಡಗಿಸಿಕೊಂಡಿರುವ ಅಪರೂಪದ ಸ್ಟಾರ್ ನಟ. ಅದರಲ್ಲೂ ಪುನೀತ್ ಹಾಡಿರುವ ಹಾಡುಗಳಲ್ಲಿ, ಆಲ್ ಮೋಸ್ಟ್ ಎಲ್ಲವೂ ಸೂಪರ್ ಹಿಟ್ ಆಗಿದ್ದು, ಜನಪ್ರೀಯತೆ ಗಳಿಸಿವೆ.

ಇದೇ ಸಾಲಿಗೆ ನಿರ್ದೇಶಕ ಎ. ಪಿ ಅರ್ಜುನ್ ಡೈರೆಕ್ಷನ್ ಮಾಡಿರೋ 'ಕಿಸ್' ಚಿತ್ರದ ಹಾಡೊಂದು ಹೊಸ ಸೇರ್ಪಡೆ ಆಗುತ್ತಿದೆ. 'ಕಿಸ್' ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ಮೂರನೇ ಹಾಡು ರಿಲೀಸ್ ಆಗುತ್ತಿದೆ. ಬೆಟ್ಟೇಗೌಡ v/s ಚಿಕ್ಕಬೋರಮ್ಮ ಎಂಬ ಈ ಹಾಡನ್ನು ಪುನೀತ್ ಹಾಡಿದ್ದು ಇದು ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ.

ಸದ್ಯ ರಿವೀಲ್ ಆಗಿರೋ ಬೆಟ್ಟೇಗೌಡ ಚಿಕ್ಕಬೋರಮ್ಮ.. ಹಾಡಿನ ಮೇಕಿಂಗ್ ಬೊಂಬಾಟ್ ಆಗಿದ್ದು,ಯುವ ನಟ ಅರ್ಜುನ್ ಹಾಗೂ ಶ್ರೀಲೀಲಾ ಕೆಮಿಸ್ಟ್ರಿ ಸಖತ್ತಾಗೆ ವರ್ಕ್‌ಔಟ್ ಆಗಿದೆ. ವಿ ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದು, ಎ.ಪಿ ಅರ್ಜುನ್ ನಿರ್ದೇಶನ ಇದೆ. ಸದ್ಯ ರಾಜಕುಮಾರನ ಕಂಠಸಿರಿಯಲ್ಲಿ ಮೂಡಿ ಬಂದಿರೋ ಬೆಟ್ಟೆಗೌಡ v/s ಚಿಕ್ಕಬೋರಮ್ಮ.. ಹಾಡು YouTubeನಲ್ಲಿ ಬಾರಿ ಸೌಂಡ್ ಮಾಡುತ್ತಿದೆ.

ABOUT THE AUTHOR

...view details