ಕರ್ನಾಟಕ

karnataka

ETV Bharat / state

ಶರಾವತಿ ಕಣಿವೆಯಲ್ಲಿ ವಿದ್ಯುತ್ ಯೋಜನೆ ಪ್ರಶ್ನಿಸಿ ಪಿಐಎಲ್: ಕಾಮಗಾರಿಗೆ ತಡೆ ನೀಡಿದ ಹೈಕೋರ್ಟ್

ಶರಾವತಿ ಕಣಿವೆಯಲ್ಲಿ ಉದ್ದೇಶಿತ ಭೂಗರ್ಭ ಜಲ ವಿದ್ಯುತ್ ಯೋಜನೆ ಜಾರಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿಸಿದ್ದು, ಈ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ಹೈಕೋರ್ಟ್​ ಈ ಕಾಮಗಾರಿಗೆ ತಡೆ ನೀಡಿದೆ.

Representative Image
ಸಂಗ್ರಹ ಚಿತ್ರ

By

Published : Nov 13, 2020, 8:03 PM IST

ಬೆಂಗಳೂರು: ಶರಾವತಿ ಕಣಿವೆಯಲ್ಲಿ ಉದ್ದೇಶಿತ ಭೂಗರ್ಭ ಜಲ ವಿದ್ಯುತ್ ಯೋಜನೆಯ ಸಮೀಕ್ಷೆ ಹಾಗೂ ಭೌಗೋಳಿಕ ತಾಂತ್ರಿಕ ಪರಿಶೋಧನೆ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಜೆಯಾಜ್ಞೆ ನೀಡಿ ಆದೇಶಿಸಿದೆ.

ಯೋಜನೆ ಪ್ರಶ್ನಿಸಿ ಬಳ್ಳಾರಿಯ ಎಡ್ವರ್ಡ್ ಸಂತೋಷ್ ಮಾರ್ಟಿನ್ ಹಾಗೂ ಯುನೈಟೆಡ್ ಕನ್ಸರ್ವೇಶನ್ ಮೂವ್​ಮೆಂಟ್​​ ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಯೋಜನೆಗೆ ಸಮೀಕ್ಷೆ ನಡೆಸಲು ಹಾಗೂ ಅಭಯಾರಣ್ಯದಲ್ಲಿ ತಾಂತ್ರಿಕ ಪರಿಶೋಧನೆಗಾಗಿ 15 ಬೋರ್ ರಂಧ್ರಗಳನ್ನು ಕೊರೆಯಲು ಅನುಮತಿ ನೀಡುವಾಗ ರಾಜ್ಯ ವನ್ಯಜೀವಿ ಮಂಡಳಿ ಅಥವಾ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮುಂದಾಗುವ ಪರಿಣಾಮಗಳ ಕುರಿತು ವಿವೇಚಿಸಿಲ್ಲ. ಹೀಗಾಗಿ ಬೋರ್ ರಂಧ್ರಗಳನ್ನು ಕೊರೆಯುವುದನ್ನು ಮುಂದಿನ ಆದೇಶದವರೆಗೂ ನಿಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಅರ್ಜಿದಾರರು, ಶರಾವತಿ ಕಣಿವೆಯಲ್ಲಿ ಉದ್ದೇಶಿತ ಭೂಗರ್ಭ ಜಲ ವಿದ್ಯುತ್ ಯೋಜನೆಯ ವ್ಯಾಪ್ತಿ ಪ್ರದೇಶವು ಅಪರೂಪದ ಪ್ರಾಣಿ ಸಂಕುಲವಿರುವ ಭೂಭಾಗವಾಗಿದೆ. ಇಲ್ಲಿ ಸಿಂಹದ ಬಾಲ ಹೋಲುವ ಸಿಂಗಳೀಕ ಎಂದು ಕರೆಯುವ ಮಂಗಗಳು ವಾಸಿಸುತ್ತಿವೆ. ಅಪಾಯದ ಅಂಚಿಗೆ ಸೇರಿರುವ ಜೀವ ವೈವಿಧ್ಯತೆಯಲ್ಲಿ ಈ ತಳಿಯೂ ಸೇರಿದೆ. ಆದ್ದರಿಂದ ಯೋಜನೆ ಮತ್ತು ಅದರ ಜಾರಿಗೆ ಸಮೀಕ್ಷೆ ನಡೆಸಲು 2020ರ ಮೇ 6ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುಮತಿ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ABOUT THE AUTHOR

...view details