ಕರ್ನಾಟಕ

karnataka

ETV Bharat / state

100ಕ್ಕೂ ಹೆಚ್ಚು ಪ್ರದೇಶದಲ್ಲಿ ಇಂದು ವಿದ್ಯುತ್ ಕಡಿತ: ವರ್ಕ್ ಫ್ರಂ ಹೋಮ್‌, ಆನ್‌ಲೈನ್ ತರಗತಿಗೆ ಸಂಕಷ್ಟ..

ಇಂದು ಬೆಂಗಳೂರಿನ 100ಕ್ಕೂ ಹೆಚ್ಚು ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದ್ದು, ವರ್ಕ್ ಫ್ರಂ ಹೋಮ್‌ ಮತ್ತು ಆನ್‌ಲೈನ್ ತರಗತಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ.

Power cuts today in Bangalore, Power cuts today in Bangalore 100 area, Bengaluru power cut news, ಬೆಂಗಳೂರಿನಲ್ಲಿ ವಿದ್ಯುತ್ ಕಡಿತ, ಬೆಂಗಳೂರಿನ 100 ನಗರಗಳಲ್ಲಿ ವಿದ್ಯುತ್ ಕಡಿತ, ಬೆಂಗಳೂರು ವಿದ್ಯುತ್ ಕಡಿತ ಸುದ್ದಿ
100ಕ್ಕೂ ಹೆಚ್ಚು ಪ್ರದೇಶದಲ್ಲಿ ಇಂದು ವಿದ್ಯುತ್ ಕಡಿತ

By

Published : Jan 17, 2022, 10:34 AM IST

ಬೆಂಗಳೂರು:ಪದೇ ಪದೆ ದುರಸ್ತಿ ಕಾರ್ಯಕ್ಕೆ ಕೈಗೊಳ್ಳುತ್ತಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕೆಲಸದಿಂದ ನಗರದಲ್ಲಿ ವಿದ್ಯುತ್ ವ್ಯತ್ಯವಾಗುತ್ತಿದೆ. ಜನರು ಸಾಕಷ್ಟು ತೊಂದರೆಗೆ ಈಡಾಗುತ್ತಿದ್ದಾರೆ. ಸೋಮವಾರ ಸಹ ನಗರದ 103ಕ್ಕೂ ಹೆಚ್ಚು ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಉದ್ದೇಶಿಸಿದೆ.

ಬೆಳಗಿನಿಂದ ಸಂಜೆಯವರೆಗೆ ಬೆಂಗಳೂರು ದಕ್ಷಿಣ ಭಾಗದ ಜಯನಗರ ವಿಭಾಗದ ವಿವಿಧ 20 ಪ್ರದೇಶ, ಕೋರಮಂಗಲ ವಿಭಾಗದ 9, ಎಚ್‌ಎಸ್‌ಆರ್ ಬಡಾವಣೆಯ 5 ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಪೂರ್ವ ವಿಭಾಗದ ಇಂದಿರಾ ನಗರ ಭಾಗದ 5, ಶಿವಾಜಿ ನಗರದ 5, ವೈಟ್‌ಫೀಲ್ಡ್ ವ್ಯಾಪ್ತಿಯ 2 ಪ್ರದೇಶಗಳು ಸೇರಿದಂತೆ ಬೆಂಗಳೂರು ಉತ್ತರ ಭಾಗದ ಮಲ್ಲೇಶ್ವರ ವಿಭಾಗದಲ್ಲಿ 4 ಪ್ರದೇಶ, ಜಾಲಹಳ್ಳಿ 5, ಹೆಬ್ಬಾಳ 6, ಪೀಣ್ಯ ಭಾಗದ 5 ಸ್ಥಳದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇನ್ನು ಪಶ್ಚಿಮ ವಿಭಾಗದ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 8, ಕೆಂಗೇರಿ 9 ಹಾಗೂ ರಾಜಾಜಿ ನಗರ ಭಾಗದ ಬರೋಬ್ಬರಿ 18 ಸ್ಥಳಗಳಲ್ಲಿ ಸೋಮವಾರ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ವರ್ಕ್ ಫ್ರಂ ಹೋಮ್‌ನವರಿಗೆ ಸಂಕಷ್ಟ:

ರಾಜ್ಯದ ಶೇ. 90ರಷ್ಟು ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗುತ್ತಿವೆ. ಎರಡು ವರ್ಷದ ಬಳಿಕ ಕಳೆದ ಡಿಸೆಂಬರ್‌ನಿಂದ ಕಚೇರಿಯಿಂದ ಕೆಲಸ ಶುರು ಮಾಡಿದ್ದ ಬಹುತೇಕ ಐಟಿ ಕಂಪನಿಗಳು ಮತ್ತೆ ವರ್ಕ್ ಫ್ರೆಂ ಹೋಂ ಘೋಷಿಸಿವೆ. ಇಷ್ಟೇ ಅಲ್ಲ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿವೆ. ಈ ರೀತಿ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉಂಟಾಗುತ್ತಿರುವ ವಿದ್ಯುತ್ ಕಡಿತದಿಂದ ತೀವ್ರ ತೊಂದರೆ ಉಂಟಾಗಲಿದೆ.

ಆನ್‌ಲೈನ್ ತರಗತಿಗೂ ಸಮಸ್ಯೆ:

ಇನ್ನು ಬೆಂಗಳೂರಿನಲ್ಲಿ ಡಿಸೆಂಬರ್ 28ರಿಂದಲೇ 1ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್‌ಲೈನ್‌ ತರಗತಿ ನಡೆಸುವಂತೆ ಸೂಚಿಸಲಾಗಿದೆ. ಹೀಗಾಗಿ ಬಹುತೇಕ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಶುರು ಮಾಡಿವೆ.

ಕಾಲೇಜು ವಿದ್ಯಾರ್ಥಿಗಳಿಗೂ 10ರಿಂದ 12ನೇ ತರಗತಿ, ವೈದ್ಯಕೀಯ ಕೋರ್ಸ್ ಹೊರತುಪಡಿಸಿ ಬಹುತೇಕರಿಗೆ ಆನ್‌ಲೈನ್ ತರಗತಿಗಳನ್ನೇ ನಡೆಸಲಾಗುತ್ತಿದೆ. ಈ ರೀತಿ ಆನ್‌ಲೈನ್ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯುತ್ ಕಡಿತದಿಂದ ತೀವ್ರ ಸಮಸ್ಯೆ ಉಂಟಾಗಿದೆ.

ABOUT THE AUTHOR

...view details