ಕರ್ನಾಟಕ

karnataka

ETV Bharat / state

ಬೆಸ್ಕಾಂ, ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯ: ಬೆಂಗಳೂರಿನ ಹಲವೆಡೆ ಪವರ್‌ಕಟ್ - Repair work by KPTCL

ಕಾಡುಗೋಡಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯುತ್ತಿದ್ದು ನಗರದ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಬೆ.ವಿ.ಕಂ ವೈಟ್‌ಫೀಲ್ಡ್‌ ವಿಭಾಗ ತಿಳಿಸಿದೆ.

Power cut
ಪವರ್ ಕಟ್

By

Published : Dec 18, 2022, 9:52 AM IST

ಬೆಂಗಳೂರು: ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿದೆ. ಹೀಗಾಗಿ, ನಗರದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆ.ವಿ.ಕಂ ವೈಟ್‌ಫೀಲ್ಡ್‌ ವಿಭಾಗ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಪವರ್ ಕಟ್?: ಭಾನುವಾರ ಬೆಳಗ್ಗೆ 10 ರಿಂದ ಮದ್ಯಾಹ್ನ 12 ಗಂಟೆವರೆಗೂ ಬೆಳತ್ತೂರು, ಅಯ್ಯಪ್ಪನಗರ ದೇವಸ್ಥಾನ, ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂಭಾಗ, ತಿರುಮಶೆಟ್ಟಿಹಳ್ಳಿ ಪ್ರದೇಶ, ಕಾಡುಗೋಡಿ, ಶಂಕರಪುರ, ಕಾಶಿವಿಶ್ವನಾಥ ಬಡಾವಣೆ, ಅಂಚೆ ಕಚೇರಿ ರಸ್ತೆ, ಹಗದೂರು, ಇಮ್ಮಡಿಹಳ್ಳಿ, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯರಸ್ತೆ, ಪಟೇಲಮ್ಮಲೇಔಟ್, ಸಿದ್ದಾರ್ಥ ಲೇಔಟ್, ವಿಎಸ್‌ಆರ್, ಚನ್ನಸಂದ್ರ, ಮುನೇಶ್ವರ ಲೇಔಟ್, ಎಂಜೆಆರ್ ಅಪಾರ್ಟ್‌ ಮೆಂಟ್, ಸಫಲ್‌ಆಯಿಲ್‌ ಫ್ಯಾಕ್ಟರಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಿಎಸ್‌ಎನ್‌ಎಲ್‌, ಚನ್ನಸಂದ್ರ, ಎಫ್‌ಸಿಐ ಗಾರ್ಡನ್‌, ಕೆಎಸ್‌ಕೆ ಸ್ಕೂಲ್ ರಸ್ತೆ, ಬಳಗೆರೆ ನಂಜಪ್ಪ ಲೇಔಟ್, ಎಕೆಜಿ ಕಾಲೋನಿ, ಪ್ರೆಸ್ಟೀಜ್‌ಮೇಬರಿ, ಪ್ರೆಸ್ಟೀಜ್ ಪಾರ್ಕ್‌ ವ್ಯೂ, ಕುಂಬಹಾಳ, ಸಾಯಿಕಾಲೇಜು, ಮಾರುತಿಲೇಔಟ್, ಬ್ರಿಗೇಡ್ ಅಪಾಟ್‌ಮೆಂಟ್, ಹರಿಯಾಣ ಗ್ರೂಪ್, ಸೀಗೆಹಳ್ಳಿ ಪ್ರದೇಶ, ನಾಗೊಂಡನಹಳ್ಳಿ, ನಾಗರಾಜ ಲೇಔಟ್‌, ಕೈತೋಟರಸ್ತೆ, ದಿನ್ನೂರು, ವಿಜಯನಗರ ಮುಖ್ಯರಸ್ತೆ, ಪ್ರಶಾಂತ್‌ಲೇಟ್‌, ಉಪಕಾರ್‌ ಲೇಔಟ್‌, ವೈಟ್‌ಫೀಲ್ಡ್‌ ಲೇಔಟ್, ವಿವೇಕಾನಂದ ರಸ್ತೆ, ವೈಟ್‌ ಫೀಲ್ಡ್‌ ಮುಖ್ಯರಸ್ತೆ, ಭೈರಪ್ಪ ಲೇಔಟ್, ಸಾಯಿಲೇಔಟ್, ಇಸಿಸಿರಸ್ತೆ, ಬೋರ್‌ವೆಲ್ ರಸ್ತೆ, ವರ್ತೂರು ಕೋಡಿ, ಹೊರವೃತ್ತ, ಭೈರವಲೀರಔಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಧಾನಸೌಧ ಬಡಾವಣೆ, ಕಾವೇರಿನಗರ, ಪ್ರೀತಿನಗರ, ಚಾಮುಂಡಿಪುರ, ಹೈಟೆನ್‌ಲೈನ್‌ ರಸ್ತೆ, ಕರ್ನಾಟಕ ಲೇಔಟ್, ರಾಜೇಶ್ವರಿ ನಗರ, ಪೀಣ್ಯ 3ನೇ ಹಂತ ಮತ್ತು 4ನೇ ಹಂತ, ಪಿಐಎ 2ನೇ ಹಂತ 1ನೇ ಅಡ್ಡರಸ್ತೆಯಿಂದ 10ನೇ ಅಡ್ಡರಸ್ತೆ, ಪಿಐಎ ಹತ್ತಿರ ಮತ್ತು ಡೈನಾಮಿಕ್ ರಸ್ತೆ, ಚೊಕ್ಕಸಂದ ಮುಖ್ಯರಸ್ತೆ, ಇಸ್ರೋ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಕೆಪಿಟಿಸಿಎಲ್ ರಿಪೇರಿ ಕಾರ್ಯ:ಕೆಪಿಟಿಸಿಎಲ್ ವತಿಯಿಂದ ಕೂಡ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಕೆಲ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೂ ಜಿ.ಬಿ. ಪಾಳ್ಯ, ಲಕ್ಷ್ಮೀ ಲೇಔಟ್, ರಾಘವೇಂದ್ರ ಲೇಔಟ್, ನ್ಯೂ ಮೈಕೋ ಲೇಔಟ್, ವಾಜಪೇಯಿ ನಗರ, ಹೊಸೂರು ಮುಖ್ಯರಸ್ತೆ, ಹೊಂಗಸಂದ್ರ, ಬೇಗೂರು ಮುಖ್ಯರಸ್ತೆ, ಶ್ರೀರಾಮನಗರ, ಬಾಲಾಜಿ ಲೇಔಟ್, ವೇಲಂಕಿನಿ, ಬಿಎಚ್‌ಇಎಲ್‌, ಎಸ್‌ ಜೆ ಆರ್ ಯುನಿನಾಕ್ಸ್‌ ಅಪಾರ್ಟ್‌ ಮೆಂಟ್, ಎಚ್.ಪಿ. ಸೂರ್ಯ, ಅರವಿಂದ್ ಮಿಲ್, ಐಬಿಎಬಿ, 3ಎಂ ಇಂಡಿಯಾ ಸಿಲ್ಕ್ಬೋರ್ಡ್ ಜಂಕ್ಷನ್, ಬೊಮ್ಮನಹಳ್ಳಿಯ ಕೆಲಭಾಗ, ಆಕ್ಸ್‌ಪೋರ್ಡ್ ಡೆಂಟಲ್ ಕಾಲೇಜು, ಎಚ್.ಪಿ ಲೇಮನ್ ಟ್ರೀ ಹೋಟೆಲ್, ಎಂಆರ್‌ಓ ಟೆಕ್, ಕೆಎಚ್‌ಎಂಡಿ ಲಾರ್ಡ್ ಪ್ಲಾಝ, ಪ್ಲೇಕ್‌ಟೋನಿಕ್ಸ್, ಟೆಲಿಫೋನ್‌ ಎಕ್ಸ್‌ಚೇಂಜ್ ಸುತ್ತಮುತ್ತಲಿನ ಪ್ರದೇಶ ಇ-ಸಿಟಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ:ಗರ್ಭಿಣಿ, ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ

ABOUT THE AUTHOR

...view details