ಕರ್ನಾಟಕ

karnataka

ETV Bharat / state

ನಾಳೆಯಿಂದ ಜಾರಿಯಾಗಬೇಕಿದ್ದ ನೈಸ್ ರಸ್ತೆಯ ಉದ್ದೇಶಿತ ದರ ಏರಿಕೆ ಮುಂದೂಡಿಕೆ

ಸದ್ಯಕ್ಕಿಲ್ಲ ಟೋಲ್​ ದರ ಏರಿಕೆ- ನೈಸ್​ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್​-ನಿರ್ಧಾರ ಮುಂದೂಡಿದ ಸಂಸ್ಥೆ

Postponement of toll rate hike of Bangalore Nice Road
ನೈಸ್ ರಸ್ತೆಯ ಉದ್ದೇಶಿತ ದರ ಏರಿಕೆ ಮುಂದೂಡಿಕೆ

By

Published : Jun 30, 2022, 3:23 PM IST

ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ದರ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನೈಸ್ ರಸ್ತೆಯ ಟೋಲ್ ದರ ಹೆಚ್ಚಳದ ಶಾಕ್ ಎದುರಾಗಿತ್ತು. ಆದರೆ ಸದ್ಯ ಸಂಸ್ಥೆಯು ದರ ಏರಿಕೆಯನ್ನು ಮುಂದೂಡಿದ್ದರಿಂದ ಪ್ರಯಾಣಿಕರಿಗೆ ರಿಲೀಫ್ ಸಿಕ್ಕಿದೆ.

ಪರಿಷ್ಕೃತ ದರ

ಬೆಂಗಳೂರಿನ ನೈಸ್ ರಸ್ತೆ ಟೋಲ್ (ದರ/ಸುಂಕ)ವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ. ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್​ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ ಟೋಲ್ ದರ 45 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು.

ನೈಸ್ ರಸ್ತೆಯ ಉದ್ದೇಶಿತ ದರ ಏರಿಕೆ ಮುಂದೂಡಿಕೆ

ಇದನ್ನೂ ಓದಿ:ಮಂಗಳೂರಿನಲ್ಲಿ ಭಾರಿ ಮಳೆ- ಜನಜೀವನ ಅಸ್ತವ್ಯಸ್ಥ: ದೇವಸ್ಥಾನ, ಮನೆಗಳಿಗೆ ನುಗ್ಗಿದ ನೀರು

ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್​ಗಳಿಗೆ 35, ಬೈಕ್​ಗಳಿಗೆ 12 ರೂ., ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್​ಗಳಿಗೆ 25ರೂ., ಬೈಕ್​ಗಳ ಟೋಲ್ ದರ 8 ರೂ.ಗೆ ಏರಿಸುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು. ಆದ್ರೆ ಈ ದರ ಏರಿಕೆಯನ್ನು ಸಂಸ್ಥೆ ಮುಂದೂಡಿದೆ.

ABOUT THE AUTHOR

...view details