ಬೆಂಗಳೂರು:ಭಾನುವಾರ ಲಾಕ್ ಡೌನ್ ಮುಂದುವರೆದಿದ್ದರಿಂದ, ಜುಲೈ 12 ರಂದು ನಡೆಯಬೇಕಿದ್ದ ಟಿಇಟಿ ಪರೀಕ್ಷೆ ಮುಂದೂಡಿಕೆಯಾಗಿದೆ.
ಜುಲೈ 12 ರಂದು ನಡೆಯಬೇಕಿದ್ದ 'ಟಿಇಟಿ' ಪರೀಕ್ಷೆ ಮುಂದೂಡಿಕೆ - Postponement of TET examination to be held on July 12
ಕೊರೊನಾ ಸೋಂಕು ಏರಿಕೆ ಆಗುತ್ತಿದ್ದು, ಇದರೊಂದಿಗೆ ಭಾನುವಾರ ಲಾಕ್ ಡೌನ್ ಮುಂದುವರೆದಿದ್ದರಿಂದ ಟಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.
'ಟಿಇಟಿ' ಪರೀಕ್ಷೆ ಮುಂದೂಡಿಕೆ
ರಾಜ್ಯದ ಶಿಕ್ಷಣ ಇಲಾಖೆ ನಡೆಸುವ ಟಿಇಟಿ ಪರೀಕ್ಷೆಯ ದಿನಾಂಕವನ್ನು, ಜುಲೈ 5 ರಂದು ಘೋಷಣೆ ಮಾಡಲಾಗಿತ್ತು. ಆದರೆ CTET ಪರೀಕ್ಷೆ ಅದೇ ದಿನ ನಡೆಯುವ ಹಿನ್ನೆಲೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಯನ್ನು ಇದೇ ಜುಲೈ 12ಕ್ಕೆ ನಡೆಸಲಾಗುವುದು ಸೂಚಿಸಲಾಗಿತ್ತು.
ಆದರೆ ಇದೀಗ ಕೊರೊನಾ ಸೋಂಕು ಏರಿಕೆ ಆಗುತ್ತಿದ್ದು, ಇದರೊಂದಿಗೆ ಭಾನುವಾರ ಲಾಕ್ ಡೌನ್ ಮುಂದುವರೆದಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಸರ್ಕಾರದ ಆದೇಶದಂತೆ ಮುಂದಿನ ದಿನಾಂಕ ಪ್ರಕಟಿಸಲಾಗುತ್ತೆ.