ಬೆಂಗಳೂರು: ಕೋವಿಡ್-19 ನಡುವೆ ಇದೀಗ ನಿಫಾ ವೈರಸ್ ರೋಗದ ಹಿನ್ನೆಲೆಯಲ್ಲಿ ಹಲವು ಸೂಚನೆಗಳನ್ನು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಒದಗಿಸಿದೆ.
ಕೇರಳ ಪ್ರಯಾಣ ಅಕ್ಟೋಬರ್‌ವರೆಗೆ ಮುಂದೂಡಿ: ಸಚಿವ ಸುಧಾಕರ್ - travel too kerala
ರಾಜ್ಯಕ್ಕೆ ನಿಫಾ ಕಂಟಕ ಎದುರಾಗಿದೆ. ಈ ಸಂಬಂಧ ಆರಂಭಿಕ ಹಂತದಲ್ಲೇ ಇದರ ನಿರ್ವಹಣೆಗೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಸೂಚನೆಗಳನ್ನು ಆರೋಗ್ಯ ಇಲಾಖೆ ಈಗಾಗಲೇ ನೀಡಿದೆ.
ಸಚಿವ ಸುಧಾಕರ್
ನೆರೆಯ ಕೇರಳ ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು/ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ತಿಳಿಸುವಂತೆ ಸೂಚಿಸಲಾಗಿದೆ.
ಇಲ್ಲಿಂದ ಕೇರಳಕ್ಕೆ ತೆರಳುವುದನ್ನು ಸಹ ಅಕ್ಟೋಬರ್ ಅಂತ್ಯದವರೆಗೆ ಮುಂದೂಡಲು ಸೂಚಿಸಲಾಗಿದ್ದು, ಈ ಕುರಿತು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.