ಬೆಂಗಳೂರು :ನಾಳೆಯಿಂದ ಸ್ನಾತಕೋತ್ತರ ಪರೀಕ್ಷೆ ಆರಂಭವಾಗುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳ ತರಗತಿಯ ಕೊಠಡಿಗಳಲ್ಲಿ ಸುಚಿತ್ವ ಕಾಪಾಡಲು ರೋಗ ನಿರೋಧಕ ಔಷಧಿ ಸಿಂಪಡನೆ ಮಾಡಲಾಯಿತು.
ನಾಳೆಯಿಂದ ಸ್ನಾತಕೋತ್ತರ ಪರೀಕ್ಷೆ ಆರಂಭ, ಪರೀಕ್ಷಾ ಕೇಂದ್ರಕ್ಕೆ ಔಷಧಿ ಸಿಂಪಡಣೆ - ಪರೀಕ್ಷಾ ಕೇಂದ್ರಗಳಿಗೆ ಔಷಧಿ ಸಿಂಪಡಣೆ
ಮೌಲ್ಯಮಾಪನ ಕುಲಸಚಿವರಾದ ಡಾ. ರಮೇಶ್ ರವರಿಗೆ ಪರೀಕ್ಷೆಯ ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿ ಎಂದು ಸೂಚಿಸಿದರು..

Bangalore vv
ಔಷಧಿ ಸಿಂಪಡಿಸಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್ ಜಾಫೆಟ್ ರವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುವಾಗ ತಪ್ಪದೇ ಮಾಸ್ಕ್ ಬಳಸಬೇಕು.
ವಿಶ್ವವಿದ್ಯಾನಿಲಯದ ದ್ವಾರಗಳಲ್ಲಿ ತಪಾಸಣೆಗೆ ಒಳಪಟ್ಟು ಅಂತರ ಕಾಪಾಡಿಕೊಂಡು ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋರಿದರು. ಮೌಲ್ಯಮಾಪನ ಕುಲಸಚಿವರಾದ ಡಾ. ರಮೇಶ್ ರವರಿಗೆ ಪರೀಕ್ಷೆಯ ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿ ಎಂದು ಸೂಚಿಸಿದರು.