ಬೆಂಗಳೂರು: ಇಂದು ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಗೋಡೆಗಳಿಗೆ, ಬಸ್ ಸ್ಟ್ಯಾಂಡ್ಗಳಲ್ಲಿ ಅಂಟಿಸಲಾಗಿದೆ.
ಸೋಂಕಿತ ಸರ್ಕಾರ ಅಧಿಕಾರದಲ್ಲಿದೆ ಎಂದು ಶಾಸಕರ ಹೆಸರು ತಿರುಚಿರುವುದು ಪೋಸ್ಟರ್ಗಳಲ್ಲಿ ಕಂಡು ಬಂದಿದೆ. ಈ ಹಿನ್ನೆಲೆ ಸ್ಥಳೀಯ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇರೆಗೆ ತನಿಖೆ ಮುಂದುವರೆಸಿದ್ದಾರೆ.
ಅಧಿವೇಶನ ವಿರೋಧಿಸಿ ‘ಸೋಂಕಿತ ಸರ್ಕಾರ’ ಎಂಬ ಪೋಸ್ಟರ್ ಇನ್ನು ಭಿತ್ತಿ ಪತ್ರಗಳಲ್ಲಿ ಹಣಕ್ಕಾಗಿ ಅಧಿಕಾರಕ್ಕೆ ಬಂದ ಸರ್ಕಾರ, ಸೋಂಕಿತ ಸರ್ಕಾರ. ಭ್ರಷ್ಟ, ಕೊರೊನಾ ಸಂಕಷ್ಟದಲ್ಲೂ ಲೂಟಿ ಮಾಡಲು ನಿಂತಿರುವ ಸೋಂಕಿತ ಸರ್ಕಾರ ಎಂದು ಇಲ್ಲಿನ ಮೇಕ್ರಿ ಸರ್ಕಲ್, ಪ್ಯಾಲೇಸ್ ರಸ್ತೆ, ಟಿವಿ ಟವರ್ ರಸ್ತೆ, ಶಂಕರ್ ಮಠ, ಕಾಮಾಕ್ಷಿಪಾಳ್ಯಾ ಬಳಿ ಅನಾಮಿಕರು ಭಿತ್ತಿಪತ್ರ ಅಂಟಿಸಿದ್ದಾರೆ.
ಅಲ್ಲದೆ ಶಾಸಕರ ಹೆಸರನ್ನು ತಿರುಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಧಿವೇಶನದ ವಿರುದ್ಧವಾಗಿ ಪೋಸ್ಟರ್ ಹಾಕಿರುವ ಹಿನ್ನೆಲೆ ಕಿಡಿಗೇಡಿಗಳ ಕುರಿತು ಮಾಹಿತಿ ಕಲೆಹಾಕುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.