ಬೆಂಗಳೂರು:ಕರ್ನಾಟಕ ಅಂಚೆ ವೃತ್ತ ನಗರದ ಕಂಠೀರದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಪೆಕ್ಸ್ 2024- ಅಂಚೆ ಚೀಟಿಗಳ ಹಬ್ಬ ಮತ್ತು 13ನೇ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಜನವರಿ 5 ರಿಂದ 8ರ ವರೆಗೆ ಆಯೋಜಿಸಲಾಗುತ್ತಿದೆ ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದರು.
ಕರ್ನಾಪೆಕ್ಸ್ - 2024:ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನೆಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನವು 2019 ರಲ್ಲಿ ಮಂಗಳೂರಿನಲ್ಲಿ ಜರುಗಿತು. ಈ ಬಾರಿಯ ಕರ್ನಾಪೆಕ್ಸ್ - 2024 ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅಂಚೆ ಚೀಟಿ ಸಂಗ್ರಹಕ್ಕೆ ಸಂಬಂಧಿಸಿದ ಚಟುವಟಿಕೆ ಜನಪ್ರಿಯಗೊಳಿಸಲು ಹಾಗೂ ಅಂಚೆ ಚೀಟಿ ಸಂಗ್ರಹಣಕಾರರಿಗೆ ಅವಕಾಶ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ವಿವಿಧ ವಿಷಯ ಬೆಳಕು ಚೆಲ್ಲುವ ಅಂಚೆ ಚೀಟಿಗಳು: ಈ ಪ್ರದರ್ಶನದಲ್ಲಿ ಇತಿಹಾಸ, ಸಂಸ್ಕೃತಿ, ಕಲೆ, ಪರಂದರೆ, ವಿಜ್ಞಾನ, ತಂತ್ರಜ್ಞಾನ, ವನ್ಯಜೀವಿಗಳು, ಸಸ್ಯ ಸಂಪತ್ತು ಹೀಗೆ ವಿವಿಧ ವಿಷಯಗಳ ಬೆಳಕು ಚೆಲ್ಲುವ ಅಂಚೆ ಚೀಟಿಗಳು, ವಿಶೇಷ ಲಕೋಟೆಗಳು, ವಿಶೇಷ ಮತ್ತು ಸಚಿತ್ರ ಪದ್ಧತಿಗಳ ಅಪರೂಪ ಮತ್ತು ವಿಭಿನ್ನ ಸಂಗ್ರಹಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.