ಬೆಂಗಳೂರು:ಚರ್ಚೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಯಾವುದೇ ಕ್ಷಣದಲ್ಲಾದರೂ ಸ್ಪೀಕರ್ ರಮೇಶ್ ಕುಮಾರ್ ಅವರು ಬಹುಮತ ಸಾಬೀತುಪಡಿಸುವಂತೆ ಮೈತ್ರಿ ಸರ್ಕಾರಕ್ಕೆ ಸೂಚನೆ ನೀಡಬಹುದು. ಇದಕ್ಕೆ ನಮ್ಮ ಬಿಜೆಪಿ ಶಾಸಕರು ರೆಡಿ ಇದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದ್ದಾರೆ.
12 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸ್ಪೀಕರ್ ರೂಲಿಂಗ್ ನೀಡುವ ಸಾಧ್ಯತೆ: ರವಿಕುಮಾರ್ - vidhan prishath member Rvaikumar
ವಿಶ್ವಾಸಮತಯಾಚನೆ ನಿರ್ಣಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದು, ಸಂಜೆ 6 ರಿಂದ ರಾತ್ರಿ 12 ಗಂಟೆಯೊಳಗೆ ಯಾವುದೇ ಕ್ಷಣದಲ್ಲಾದರೂ ಮತ ಹಾಕಲು ಸ್ಪೀಕರ್ ರೂಲಿಂಗ್ ನೀಡುವ ಸಾಧ್ಯತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದ್ದಾರೆ.
12 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸ್ಪೀಕರ್ ರೂಲಿಂಗ್ ನೀಡುವ ಸಾಧ್ಯತೆ: ರವಿಕುಮಾರ್
ಬಹುಮತದಲ್ಲಿ ಮೈತ್ರಿ ಸರ್ಕಾರ ಸೋಲಲಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಸದನಕ್ಕೆ ಹಾಜರಾಗುವ ಸಾಧ್ಯತೆಯಿದ್ದು, ಪಕ್ಷೇತರರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುವುದು ಸದ್ಯದ ಕುತೂಹಲವಾಗಿದೆ.