ಬೆಂಗಳೂರು:ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಮನೆಯನ್ನು ಕಂಟೇನ್ಮೆಂಟ್ ಮಾಡುವ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಆದರೆ, ಹೋಂ ಐಸೋಲೇಷನ್ನಲ್ಲಿರುವವರು ಮನೆಗೆ ಹಾಕಿರುವ ಭಿತ್ತಿಪತ್ರವನ್ನು ಹರಿದು ಹಾಕಿ ನಿಯಮ ಉಲ್ಲಂಘಟಿಸಿದ್ದಾರೆ ಎನ್ನಲಾಗುತ್ತಿದೆ.
ಮಂಜುನಾಥ ನಗರದ 5ನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒಂದು ಮನೆಯಲ್ಲಿ 8 ಸದಸ್ಯರು ಹಾಗೂ ಇನ್ನೊಂದು ಮನೆಯಲ್ಲಿ 4 ಸದಸ್ಯರು ಹೋಂ ಐಸೋಲೇಷನ್ನಲ್ಲಿದ್ದಾರೆ. ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ. ಹೀಗಾಗಿ 14 ದಿನ ಮನೆಗೆ ಯಾರೂ ಭೇಟಿ ನೀಡದಿರಿ ಎಂದು ಬರೆದಿರುವ ಜಾಗೃತಿಯ ಭಿತ್ತಿಪತ್ರವನ್ನು ಮನೆಯವರೇ ಹರಿದುಹಾಕುವ ಮೂಲಕ ನಿಯಮ ಉಲ್ಲಂಘಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.