ಬೆಂಗಳೂರು:ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಫೈನಲ್ ಆಗಿದ್ದು, ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಅಧಿಕೃತವಾಗಿ ಘೋಷಣೆ ಹೊರಬರಬೇಕಾಗಿದೆ.
ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಅಂತಿಮ: ಅಧಿಕೃತ ಪ್ರಕಟಣೆ ಮಾತ್ರ ಬಾಕಿ! - Bengaluru news
ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಕೊನೆಗೂ ಫೈನಲ್ ಆಗಿದ್ದು, ಈಗಾಗಲೇ ಅಂತಿಮ ಮುದ್ರೆಗಾಗಿ ರಾಜ್ಯಪಾರಿಗೆ ರವಾನೆ ಮಾಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಹೊರಬರಬೇಕಾಗಿದೆ.
ನೂತನ ಸಚಿವರಿಗೆ ನಾಳೆ ಖಾತೆಗಳ ಹಂಚಿಕೆ ಬಹುತೇಕ ಫೈನಲ್...ಸಂಭಾವ್ಯ ಪಟ್ಟಿ ಇಲ್ಲಿದೆ!
ಈ ಮೊದಲೇ ತಮ್ಮ ಮಂತ್ರಿ ಮಂಡಲದಲ್ಲಿದ್ದ 17 ಸಚಿವರಿಗೂ ಹೆಚ್ಚುವರಿಯಾಗಿ ಖಾತೆಗಳ ಹಂಚಿಕೆ ಮಾಡಿದ್ದು ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.
ಸಂಭಾವ್ಯ ಖಾತೆಗಳ ಹಂಚಿಕೆ ಪಟ್ಟಿ:
- ಎಸ್. ಟಿ ಸೋಮಶೇಖರ್- ಸಹಕಾರ ಖಾತೆ
- ಬೈರತಿ ಬಸವರಾಜ್- ನಗರಾಭಿವೃದ್ಧಿ (ಬೆಂಗಳೂರು ಹೊರತು)
- ಡಾ. ಸುಧಾಕರ್- ವೈದ್ಯಕೀಯ ಶಿಕ್ಷಣ ಖಾತೆ
- ಬಿ. ಸಿ. ಪಾಟೀಲ್- ಅರಣ್ಯ ಖಾತೆ
- ರಮೇಶ್ ಜಾರಕಿಹೊಳಿ- ಜಲ ಸಂಪನ್ಮೂಲ ಇಲಾಖೆ
- ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ
- ಶ್ರೀಮಂತ ಪಾಟೀಲ್- ಸಕ್ಕರೆ ಮತ್ತು ಜವಳಿ ಖಾತೆ
- ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ
- ನಾರಾಯಣಗೌಡ- ಪೌರಾಡಳಿತ ಮತ್ತು ತೋಟಗಾರಿಕೆ
- ಕೆ. ಗೋಪಾಲಯ್ಯ- ಸಣ್ಣ ಕೈಗಾರಿಕೆ
Last Updated : Feb 10, 2020, 12:56 PM IST