ಬೆಂಗಳೂರು: ಸಚಿವರು ನೆಗೆಟಿವ್ ಆಗಿ ಆ ಹೇಳಿಕೆ ಕೊಟ್ಟಿದ್ದಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಂದ ಹೇಳಿದ್ದಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರರನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದೆಂಬ ಹೇಳಿಕೆಯನ್ನು ಬೇರೆ ಅರ್ಥದಲ್ಲಿ ಭಾವಿಸಬಾರದು. ಮಹಿಳೆಯರು ಜಾಗ್ರತೆಯಿಂದ ಇರಬೇಕೆಂಬ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ರಾತ್ರಿ 12 ಆದರೂ ಹೆಣ್ಣು ಮಕ್ಕಳು ಓಡಾಡಬೇಕು. ಹಾಗೆ ಓಡಾಡ್ತಿದ್ರೇನೇ ಈ ರೀತಿಯ ತೊಂದರೆಗೆ ಸಿಲುಕಿಕೊಳ್ಳುವವರಿಗೆ ಧೈರ್ಯ ಬರುತ್ತದೆ. ಹೆಣ್ಣು ಮಕ್ಕಳನ್ನು ಓಡಾಡಬಾರದೆಂದು ನಿರ್ಬಂಧಿಸಲು ಆಗಲ್ಲ. ಪುರುಷರು ನೋಡುವ ದೃಷ್ಟಿ ಬದಲಾಗಬೇಕು ಎಂದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆರೋಪಿಗಳ ಬಂಧನ ಇನ್ನೂ ಆಗದಿರುವುದು ಸರ್ಕಾರದ ವೈಫಲ್ಯ ಅಂತ ಹೇಳುವುದಕ್ಕೆ ಆಗುವುದಿಲ್ಲ. ಪೊಲೀಸ್ ಇಲಾಖೆ ವೈಫಲ್ಯವೂ ಅಲ್ಲ. ತಪ್ಪು ಮಾಡಿದವರು ಬುದ್ಧಿವಂತಿಕೆಯಿಂದ ತಲೆ ತಪ್ಪಿಸಿಕೊಂಡಿದ್ದಾರೆ. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ.
ಹಗಲು ವೇಳೆ ಜನರು ಓಡಾಡುತ್ತಿರುತ್ತಾರೆ. ಸಾರ್ವಜನಿಕರು, ಅಕ್ಕಪಕ್ಕದ ಜನ ಗಮನಿಸುತ್ತಿರುತ್ತಾರೆ. ರಾತ್ರಿ ವೇಳೆ ಇಂತಹ ಘಟನೆ ನಡೆದರೆ ಯಾರಿಗೂ ಕಾಣುವುದಿಲ್ಲ. ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಾತ್ರಿ ವೇಳೆ ಹೆಣ್ಣು ಮಕ್ಕಳು ಓಡಾಡಬಾರದು ಅಂತಲ್ಲ, ಅವರ ಕೆಲಸಗಳಿದ್ದಾಗ ನಿಭಾಯಿಸಬೇಕಾಗುತ್ತದೆ. ಆದರೆ ಜಾಗ್ರತೆ ವಹಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ:ಪೊಲೀಸ್ ಅಕಾಡೆಮಿಯಲ್ಲಿ ಗನ್ ಹಿಡಿದು ಶೂಟ್ ಟ್ರಯಲ್ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ