ಬೆಂಗಳೂರು: ಎಲ್ಲೆಂದರಲ್ಲಿ ಕೈಗಾರಿಕಾ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕುವ ಸಂಬಂಧ ತ್ಯಾಜ್ಯ ಸಾಗಾಟದ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಬೇಕು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಶ್ರೀನಿವಾಸಲು ಆದೇಶಿಸಿದ್ದಾರೆ.
ಈ ಮೂಲಕ ತ್ಯಾಜ್ಯ ನಿರ್ವಹಣೆ ಸಂಪರ್ಕವನ್ನು ನೇರವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಂಟ್ರೋಲ್ ರೂಂಗೆ ಕಲ್ಪಿಸಬೇಕೆಂದು ಅವರು ತಿಳಿಸಿದ್ದಾರೆ. ಈ ರೀತಿ ಜಿಪಿಎಸ್ ಅಳವಡಿಸಿದರೆ ಅಪಾಯಕಾರಿ ತ್ಯಾಜ್ಯದ ಬೇಕಾಬಿಟ್ಟಿ ವಿಲೇವಾರಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.