ಬೆಂಗಳೂರು: ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ ಔರಾದ್ಕರ್ ವರದಿಯ ಬಗ್ಗೆ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಹೊಂದಿದೆ. ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಇಲ್ಲದೇ ಇರುವ ಕಾರಣ ತಮ್ಮ ತಮ್ಮ ಇಲಾಖೆಯ ಸಿಬ್ಬಂದಿ ಜತೆ ತಮ್ಮ ನೋವನ್ನ ತೋಡಿಕೊಳ್ತಿದ್ದಾರೆ. ಇದೀಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಕುಟುಂಬಗಳು ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸೋದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಔರಾದ್ಕರ್ ವರದಿ ಅಸಮರ್ಪಕ ಜಾರಿ ವಿರುದ್ಧ ಪೊಲೀಸರಿಂದ ಮತ ಬಹಿಷ್ಕಾರ.. ಸಿಎಂಗೆ ಪತ್ರ - ಔರಧ್ಕರ್ ಯೋಜನೆ ವಿರೋಧಿಸಿ ಪೊಲೀಸರಿಂದ ಮತ ಬಹಿಷ್ಕಾರ
ರಾಜ್ಯ ಸರ್ಕಾರ ಔರಾದ್ಕರ್ ವರದಿ ಜಾರಿ ಮಾಡಿದ್ದರಿಂದ ಒಂದು ರೂಪಾಯಿ ಉಪಯೋಗವೂ ಇಲ್ಲ. ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಗೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ದುಡಿಯುವ ಸಿಬ್ಬಂದಿಗೆ 4ನೇ ಶನಿವಾರ ರಜೆ ಕೂಡ ರದ್ದು ಮಾಡಲಾಗಿದೆ.
ರಾಜ್ಯ ಸರ್ಕಾರ ಔರಾದ್ಕರ್ ವರದಿ ಜಾರಿ ಮಾಡಿದ್ದರಿಂದಒಂದು ರೂಪಾಯಿ ಉಪಯೋಗವೂ ಇಲ್ಲ. ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಗೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ದುಡಿಯುವ ಸಿಬ್ಬಂದಿಗೆ 4ನೇ ಶನಿವಾರ ರಜೆ ಕೂಡ ರದ್ದು ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 90 ಸಾವಿರದಿಂದ 1ಲಕ್ಷ ನೌಕರರಿದ್ದು, ಎಲ್ಲಾ ಕುಟುಂಬಗಳು ಸರ್ಕಾರದ ಈ ಧೋರಣೆಯಿಂದ ಅಸಮಾಧಾನ ಗೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆ ಹಾಗೆ ಮುಂದಿನ ಎಲ್ಲಾ ಚುನಾವಣೆಗಳಿಗೆ ಮತದಾನವನ್ನ ಬಹಿಷ್ಕಾರ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
TAGGED:
police Letter to Yeddyurappa