ಬೆಂಗಳೂರು: ರಾಜಕೀಯದಲ್ಲಿ ರಾಜಕೀಯ ಮಾಡೋಣ. ರಾಜ್ಯದ ಹಿತ ಕಾಯುವಲ್ಲಿ ರಾಜಕೀಯ ಖಂಡಿತಾ ಅನಗತ್ಯ ಎಂದು ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮೂಲಕ ಮೈತ್ರಿ ಸರ್ಕಾರದ ನಾಯಕರಿಗೆ ಸಲಹೆ ನೀಡಿದ್ದಾರೆ.
ಸಂಸದರೊಂದಿಗೆ ಸೇರಿ ರಾಜ್ಯದ ಹಿತ ಕಾಯುವಲ್ಲಿ ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ರಾಜಕೀಯದಲ್ಲಿ ರಾಜಕೀಯ ಮಾಡೋಣ. ರಾಜ್ಯದ ಹಿತ ಕಾಯುವಲ್ಲಿ ರಾಜಕೀಯ ಖಂಡಿತಾ ಅನಗತ್ಯ ಎಂದು ಟ್ವೀಟ್ ಮಾಡಿ ಅದನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಹೆಚ್.ಕೆ.ಪಾಟೀಲ್ ಅವರ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.
ಕೃತಜ್ಞತೆ ಸಲ್ಲಿಕೆ:
ಕೇಂದ್ರ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನನಗೆ ವೈಯುಕ್ತಿಕ ಕರೆ ಮಾಡಿ ಅಭಿನಂದಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಹಿರಿಯರಾದ ಖರ್ಗೆಯವರಿಗೆ, ನನ್ನ ಪ್ರೀತಿಯ ಸಹೋದರ ಸಮಾನರಾದ ಹೆಚ್.ಕೆ.ಪಾಟೀಲ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
ಹಾರ, ಬೊಕ್ಕೆ ತರಬೇಡಿ:
ಪ್ರಮಾಣವಚನ ಸ್ವೀಕರಿಸಿ ನಾಳೆ ಸಂಜೆ 5 ಗಂಟೆಗೆ ಬೆಂಗಳೂರಿಗೆ ಬರುವವನಿದ್ದೇನೆ. ನನ್ನನ್ನು ಅಭಿನಂದಿಸಲು ಬರುವ ಎಲ್ಲರಲ್ಲಿ ಮತ್ತೊಮ್ಮೆ ಕಳಕಳಿಯ ವಿನಂತಿ ಮಾಡುತ್ತಿದ್ದೇನೆ. ಹಿಂದೆ ಮನವಿ ಮಾಡಿಕೊಂಡಂತೆ ನೀವು ಬರುವಾಗ ದಯವಿಟ್ಟು ಹಾರ, ಬೊಕ್ಕೆ ತರಬೇಡಿ. ನೀವು ಗಿಡ, ಪುಸ್ತಕ ತಂದರೆ ವಿನಂಮ್ರತೆಯಿಂದ ಸ್ವೀಕರಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿ ಎಂದು ನೂತನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.