ಬೆಂಗಳೂರು: ರಾಜಕಾರಣ ನಾಳೆಗೆ ನಿಲ್ಲುವುದಿಲ್ಲ. ಸಿಎಂ ಬಿಎಸ್ವೈ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸರಿ ಇದೆ ಎಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ. ದೇವೇಗೌಡ ಸಮರ್ಥಿಕೊಂಡಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಬಿಎಸ್ವೈ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ನಗರದ ಜೆ ಪಿ ಭವನದಲ್ಲಿ ನಡೆದ ಜಿಲ್ಲಾವಾರು ಮುಖಂಡ ಸಭೆ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ರಾಜಕೀಯ ನಾಳೆಗೆ ನಿಲ್ಲಲ್ಲವೆಂದು ಹೇಳಿದರು.
ನಾನು ಮಾತನಾಡುವುದು ಬಹಳ ಇದ್ದು, ಕಾಲ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.