ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ವೈದ್ಯರ ದಿನ: ಶುಭ ಕೋರಿದ ಗಣ್ಯರು

ರಾಷ್ಟ್ರೀಯ ವೈದ್ಯರ ದಿನದ ನಿಮಿತ್ತ ರಾಜಕಾರಣಿಗಳು ಶುಭಾಶಯ ಕೋರಿದ್ದಾರೆ. ಈ ಕೊರೊನಾ ಕಾಲದಲ್ಲಿ ಅವರು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ದಾರೆ.

By

Published : Jul 1, 2021, 12:34 PM IST

Updated : Jul 1, 2021, 12:51 PM IST

Politicians wishes for national doctors day
ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಶುಭ ಕೋರಿದ ಗಣ್ಯರು

ಬೆಂಗಳೂರು: ರಾಷ್ಟ್ರೀಯ ವೈದ್ಯರ ದಿನದ ನಿಮಿತ್ತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.

ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿರುವ ನಮ್ಮ ಎಲ್ಲ ವೈದ್ಯರಿಗೆ ಕೃತಜ್ಞತೆಗಳು. ವಿಶೇಷವಾಗಿ, ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ನಿಮ್ಮ ಬದ್ಧತೆ, ಸಮರ್ಪಣೆ ಮತ್ತು ಸಹಾನುಭೂತಿಗಳಿಗೆ ಇಡೀ ಸಮಾಜ ನಿಮಗೆ ಚಿರಋಣಿಯಾಗಿದೆ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ವೈದ್ಯೋ ನಾರಾಯಣೋ ಹರಿಃ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ವೈದ್ಯರು ತಮ್ಮ ಜೀವದ ಹಂಗು ತೊರೆದು ದೇಶದ ಜನತೆಯ ಆರೋಗ್ಯ ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವುದಕ್ಕೆ ಇತ್ತೀಚಿನ ಕೋವಿಡ್ 19 ತೊಂದೊಡ್ಡಿದ್ದ ಪರಿಸ್ಥಿತಿ ಉದಾಹರಣೆ ಮಾತ್ರ ಎಂದಿದ್ದಾರೆ.

ಇದೇ ರೀತಿ ಶತಮಾನಗಳಿಂದ ವೈದ್ಯರು ಮಾನವ ಕುಲದ ಪೀಳಿಗೆ ಮುಂದುವರೆಯುವಲ್ಲಿ ಅತಿಮುಖ್ಯ ಪಾತ್ರ ವಹಿಸಿದ್ದಾರೆ. ಈ ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಸಮಸ್ತ ವೈದ್ಯ ವೃಂದಕ್ಕೆ ಕೃತಜ್ಞತಾಪೂರಕ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ರಿಕಾ ದಿನಾಚರಣೆ ಶುಭಾಶಯ ಕೋರಿದ ಸಿಎಂ ಬಿಎಸ್​ವೈ, ಮಾಜಿ ಸಿಎಂ ಹೆಚ್​​ಡಿಕೆ

ಅದೇ ರೀತಿ ಕುಮಾರಸ್ವಾಮಿ ಅವರು ಸಹ, ಜೀವಗಳಿಗಾಗಿ ಜೀವನವನ್ನು ಮುಡಿಪಾಗಿಟ್ಟ ಎಲ್ಲ ವೈದ್ಯರಿಗೂ ವೈದ್ಯರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಾಡಿನ ವೈದ್ಯರ ಸೇವೆ ಶ್ಲಾಘನೀಯ. ವೈದ್ಯ ಮಿತ್ರರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.

Last Updated : Jul 1, 2021, 12:51 PM IST

ABOUT THE AUTHOR

...view details