ಕರ್ನಾಟಕ

karnataka

ETV Bharat / state

ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಗಳ ಸಹಚರರಿಂದ ಹಲ್ಲೆ!: ವಿಡಿಯೋ - bangalore news

ಪೊಲೀಸರು ಎಂದು ಹೇಳಿದರೂ ಮಾತಿನ ಚಕಮಕಿ ನಡೆಸಿ, ನಡುರಸ್ತೆಯಲ್ಲಿ ತಳ್ಳಾಟ ನಡೆಸಿದ್ದಾರೆ. ಈ ವೇಳೆ, ಪಿಎಸ್​ಐ ಸಂತೋಷ್, ಎಸ್​ಐ ರವಿಕುಮಾರ್​ಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು, ಡಿಸ್ಚಾರ್ಜ್​ ಆಗಿದ್ದಾರೆ.

ಕಳ್ಳರನ್ನು ಅರೆಸ್ಟ್ ಮಾಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ
ಕಳ್ಳರನ್ನು ಅರೆಸ್ಟ್ ಮಾಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ

By

Published : Nov 26, 2020, 4:47 PM IST

ಬೆಂಗಳೂರು: ಕಳ್ಳತನ ಪ್ರಕರಣದ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸ್​​ ತಂಡದ ಮೇಲೆಯೇ ಆರೋಪಿಗಳ ಸಹಚರರು ಹಲ್ಲೆ ಮಾಡಿದ್ದಾರೆ.

ವಿಜಯನಗರ, ಕಾಮಾಕ್ಷಿಪಾಳ್ಯ ಹಾಗೂ‌ ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಕಾಮಾಕ್ಷಿಪಾಳ್ಯ ಠಾಣೆಯ ಪಿಎಸ್​ಐ ಸಂತೋಷ್ ನೇತೃತ್ವದ ತಂಡ ಧಾರವಾಡಕ್ಕೆ ಹೋಗಿತ್ತು. ಈ ವೇಳೆ, ಮೂರು ಮಂದಿ ಆರೋಪಿಗಳನ್ನು ಬಂಧಿಸುವಾಗ ಖದೀಮರ ಸಹಚರರು ಬಂಧನಕ್ಕೆ ಅಡ್ಡಿ ಪಡಿಸಿದ್ದಾರೆ.

ಕಳ್ಳರನ್ನು ಅರೆಸ್ಟ್ ಮಾಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ

ಪೊಲೀಸರು ಎಂದು ಹೇಳಿದರೂ ಮಾತಿನ ಚಕಮಕಿ ನಡೆಸಿ, ನಡುರಸ್ತೆಯಲ್ಲಿ ತಳ್ಳಾಟ ನಡೆಸಿದ್ದಾರೆ. ಈ ವೇಳೆ, ಪಿಎಸ್​ಐ ಸಂತೋಷ್, ಎಸ್​ಐ ರವಿಕುಮಾರ್​ಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು, ಡಿಸ್ಚಾರ್ಜ್​ ಆಗಿದ್ದಾರೆ. ಈ ಬಗ್ಗೆ ‌ ಸಂತೋಷ್ ದೂರು ದಾಖಲಿಸಿದ್ದಾರೆ.

ABOUT THE AUTHOR

...view details