ಬೆಂಗಳೂರು: ಸಿಎಂ ನಿವಾಸದ ಬಳಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ನಿಯಮ ಪಾಲಿಸುವಂತೆ ತಿಳಿಹೇಳಿ ಕಳಿಸಿಕೊಟ್ಟಿದ್ದಾರೆ.
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ: ಪೊಲೀಸರಿಂದ ಸವಾರರಿಗೆ ಖಡಕ್ ವಾರ್ನಿಂಗ್ - ಹೆಲ್ಮೆಟ್ ಧರಿಸದವರಿಗೆ ಪೊಲೀಸರಿಂದ ತರಾಟೆ
ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರನ್ನು ಸಿಎಂ ನಿವಾಸದ ಮುಂದೆ ತಡೆದ ಪೊಲೀಸರು ವಾರ್ನಿಂಗ್ ನೀಡಿ ಕಳಿಸಿದರು.
![ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ: ಪೊಲೀಸರಿಂದ ಸವಾರರಿಗೆ ಖಡಕ್ ವಾರ್ನಿಂಗ್ Police Warning to Traffic rules violators](https://etvbharatimages.akamaized.net/etvbharat/prod-images/768-512-8501205-1026-8501205-1597991479421.jpg)
ಪೊಲೀಸರಿಂದ ಸವಾರರಿಗೆ ಖಡಕ್ ವಾರ್ನಿಂಗ್
ಕೆಲ ದ್ವಿಚಕ್ರ ವಾಹನ ಸವಾರರು ಕುಮಾರ ಪಾರ್ಕ್ ರಸ್ತೆಯಲ್ಲಿ ಆಗಮಿಸುತ್ತಿದ್ದರು. ಅವರಲ್ಲಿ ಕೆಲವರು ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಪೂರ್ವ ವಲಯ ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ವಾಕಿಟಾಕಿ ಮೂಲಕ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಎಂ ನಿವಾಸದ ಬಳಿ ಬೈಕ್ ಸವಾರರನ್ನು ತಡೆದ ಪೊಲೀಸರು, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡದಂತೆ ಸವಾರರಿಗೆ ಖಡಕ್ ವಾರ್ನಿಂಗ್ ಕೊಟ್ಟು ಕಳಿಸಿದ್ದಾರೆ.
ಪೊಲೀಸರಿಂದ ವಾಹನ ಸವಾರರಿಗೆ ಖಡಕ್ ವಾರ್ನಿಂಗ್
ಇದೇ ವೇಳೆ ಕಾರೊಂದರಲ್ಲಿ ಯುವಕರು ಜೋರಾಗಿ ಸಂಗೀತ ಹಾಕಿಕೊಂಡು ಬರುತಿದ್ದರು. ಅವರನ್ನೂ ತಡೆದ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಪುನರಾವರ್ತಿಸದಂತೆ ಹೇಳಿ ಕಳಿಸಿದರು.