ಬೆಂಗಳೂರು: ನಗರದ ದಕ್ಷಿಣ ವಿಭಾಗದ ಪೊಲೀಸರು ಮಂಗಳವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಕಳೆದ 5 ವರ್ಷದಲ್ಲಿ ಸಕ್ರಿಯಲಾಗಿದ್ದ ಹಾಗೂ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಅಗ್ನಿಶ್ರೀಧರ್, ಬಚ್ಚನ್ ವಿಚಾರಣೆ
ಕುಖ್ಯಾತ ರೌಡಿಶೀಟರ್ಗಳಾದ ಅಗ್ನಿಶ್ರೀಧರ್ ಹಾಗೂ ಬಚ್ಚನ್ ಅವರನ್ನು ದಕ್ಷಿಣ ಕುಮಾರಸ್ವಾಮಿ ಪೊಲೀಸ್ ಠಾಣಾ ಅಧಿಕಾರಿಗಳು ಕರೆಯಿಸಿ ಬಾಂಡ್ ಬರೆಸಿಕೊಂಡಿದ್ದಾರೆ. ಸುಮಾರು 20 ದಿನಗಳ ಹಿಂದೆ ಠಾಣೆಗೆ ಕರೆಸಿ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಸೂಚನೆ ನೀಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಐಪಿಸಿ 110 ಸೆಕ್ಷನ್?
ಇದು ಸಿಆರ್ಪಿಸಿ ಸೆಕ್ಯೂರಿಟಿ ಸೆಕ್ಷೆನ್ ಅಡಿಯಲ್ಲಿ ಬರುವ ಕಾಯ್ದೆ. ಐಪಿಸಿ ಕಾಯ್ದೆ 110ರ ಅಡಿಯಲ್ಲಿ ಹೆಬಿಚುವಲ್ ಅಫೆಂಡರ್ಸ್ ಕರೆಯಿಸಿ ವಾರ್ನಿಂಗ್ ಮಾಡಿ ಪೊಲೀಸರು ಬಾಂಡ್ ಬರೆಸಿಕೊಳ್ಳುತ್ತಾರೆ. ಯಾವುದೇ ಅಪರಾಧ ಪ್ರಕರಣದಲ್ಲಿ ಮುಂದೆ ಭಾಗಿಯಾಗದಂತೆ ಸೂಚಿಸಿ, 3 ಲಕ್ಷದಿಂದ 5-10 ಲಕ್ಷ ರೂ.ವರೆಗೂ ಬಾಂಡ್ ಮಾಡಿಸಿಕೊಳ್ಳುತ್ತಾರೆ. ಈ ರೀತಿಯ ಬಾಂಡ್ ಬಳಿಕವೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದರೆ ಬಾಂಡ್ನ ಪೂರ್ತಿ ಮೊತ್ತವನ್ನು ದಂಡದ ರೂಪದಲ್ಲಿ ವ್ಯಕ್ತಿ ಕಟ್ಟಬೇಕಾಗುತ್ತದೆ. ಅಥವಾ ಪೊಲೀಸರೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಬಾಂಡ್ ಮೊತ್ತವನ್ನು 6 ತಿಂಗಳು, 1-2 ವರ್ಷ ಅವಧಿ ಹಾಗೂ ಅದಕ್ಕೂ ಹೆಚ್ಚಿನ ಕಾಲ ಪ್ರಕರಣಗಳ ಆಧಾರದ ಮೇಲೆ ಇರಿಸಲಾಗುತ್ತದೆ. ಈ ಅಧಿಕಾರವನ್ನು ಅರೆನ್ಯಾಯಾಂಗ ಅಧಿಕಾರ ಎನ್ನುತ್ತಾರೆ. ಈ ಅರೆನ್ಯಾಯಾಂಗ ವ್ಯವಸ್ಥೆಯ ಅಧಿಕಾರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಆಯುಕ್ತರಿಂದ ಹಿಡಿದು ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ.
ಇದನ್ನೂ ಓದಿ:ಗಡಿ ಜಿಲ್ಲೆಗಳಲ್ಲಿ ಕೋವಿಡ್ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೈಕೋರ್ಟ್ ಆದೇಶ