ಬೆಂಗಳೂರು :ಫೋನ್ ಕದ್ದಾಲಿಕೆ ಆರೋಪ ಮಾಡಿರುವ ಶಾಸಕ ಅರವಿಂದ ಬೆಲ್ಲದ್ ನೀಡಿದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಹೈದರಾಬಾದ್ ಅರ್ಚಕರೊಬ್ಬರಿಗೆ ಸೇರಿರುವುದನ್ನು ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಜೈಲಿನಲ್ಲಿ ಯುವರಾಜ್ ಸ್ವಾಮಿ ಹೆಸರಿನಲ್ಲಿ ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದ್ದ ನಂಬರ್ ಪರಿಶೀಲಿಸಿದಾಗ ಹೈದರಾಬಾದ್ ನಿವಾಸಿಯೊಬ್ಬರಿಗೆ ಸೇರಿದ ನಂಬರ್ ಇದಾಗಿದೆ ಎಂಬುದು ತಿಳಿದು ಬಂದಿದೆ.
ಈ ಕುರಿತು ಬೆಲ್ಲದ್ ಅವರ ಬಳಿ ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ಕರೆ ಬಂದಿರುವ ನಂಬರ್ ಮಿಸ್ ಆಗಿದೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನಾನು ಎಲ್ಲಿಗೆ ರಹಸ್ಯವಾಗಿ ಹೋದರೂ ಬೇರೆಯವರು ಗಮನಿಸುತ್ತಿದ್ದಾರೆ. ನನ್ನ ಸುತ್ತಮುತ್ತ ಅನುಮಾನಸ್ಪಾದ ವ್ಯಕ್ತಿಗಳೇ ಕಾಣಸಿಗುತ್ತಾರೆ. ನಾನು ದೆಹಲಿಗೆ ರಹಸ್ಯವಾಗಿ ಹೋಗಿದ್ದೆ.