ಕರ್ನಾಟಕ

karnataka

ETV Bharat / state

ಮಾಸ್ಕ್ ಓಕೆ, ಹೆಲ್ಮೆಟ್ ಇಲ್ಲ ಯಾಕೆ?: ವಾಹನ ಸವಾರರೇ ಎಚ್ಚರ... ಎಚ್ಚರ..!! - Benglure rider without wearing a helmet news

ಬೆಂಗಳೂರಿನಲ್ಲಿ ಕೆಲ ವಾಹನ ಸವಾರರು ಮಾಸ್ಕ್ ಹಾಕಿದರೂ ಕೂಡ ಹೆಲ್ಮೆಟ್ ಧರಿಸದೇ ಸಂಚಾರ ಮಾಡುತ್ತಿದ್ದು, ಅಂತಹವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.

Helmet
Helmet

By

Published : Aug 10, 2020, 10:52 AM IST

ಬೆಂಗಳೂರು: ಅಪಘಾತದ ಸಂದರ್ಭದಲ್ಲಿ ನಮ್ಮ ಪ್ರಾಣ ರಕ್ಷಣೆ ಮಾಡಲು ಹೆಲ್ಮೆಟ್ ಬಹಳ ಪ್ರಯೋಜನಕಾರಿ. ಆದರೆ, ಕೊರೊನಾ ಬಂದ ನಂತರ ಸಿಗ್ನಲ್‌ ಬಳಿ ಅಷ್ಟೊಂದು ಪೊಲೀಸರು ಇಲ್ಲ ಎಂಬ ಕಾರಣಕ್ಕೆ ಬಹುತೇಕ ವಾಹನ ಸವಾರರು ಹೆಲ್ಮೆಟ್ ಧರಿಸದೇ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಕೊರೊನಾಗೆ ಹೆದರಿ ತಮಗೆಲ್ಲಿ ಸೋಂಕು ತಗಲುತ್ತದೆಯೋ ಎಂದು ಪ್ರತಿಯೊಬ್ಬರು ಮಾಸ್ಕ್ ಧರಿಸಿ ಹೊರಗಡೆ ಹೋಗುತ್ತಿದ್ದಾರೆ. ಆದರೆ, ವಾಹನ ಸವಾರರು ಮಾಸ್ಕ್ ಹಾಕಿದರೂ ಕೂಡ ಹೆಲ್ಮೆಟ್ ಧರಿಸದೇ ಸಂಚಾರ ಮಾಡುತ್ತಿದ್ದಾರೆ.

ಆದರೆ, ಪೊಲೀಸರು ಚಾಣಾಕ್ಷತನದಿಂದ ತಂತ್ರಜ್ಞಾನದ ಮುಖಾಂತರ ಇಂತಹ ದೃಶ್ಯಗಳನ್ನು ಕಂಡು ಹಿಡಿದು ಸದ್ಯ ಬೆಂಗಳೂರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಾಸ್ಕ್ ಓಕೆ, ಹೆಲ್ಮೆಟ್ ಇಲ್ಲ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಕೊರೊನಾ ಸೋಂಕು ಕಂಡು ಬಂದ ಬಳಿಕ ಕೆಲ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ABOUT THE AUTHOR

...view details