ಬೆಂಗಳೂರು:ಸಾರಿಗೆ ನೌಕರರು ವಿಭಿನ್ನ ರೀತಿಯ ಮುಷ್ಕರಕ್ಕೆ ತಯಾರಿ ನಡೆಸಿದ್ದು, ಇತ್ತ ಸಾರಿಗೆ ನೌಕರರ ಮುಷ್ಕರಕ್ಕೆ ಹೋಗದಂತೆ ಕೋಡಿಹಳ್ಳಿ ಚಂದ್ರಶೇಖರ್ಗೆ ಪೊಲೀಸರು ದಿಗ್ಬಂಧನ ಹಾಕಿದ್ದಾರೆ.
ಸಾರಿಗೆ ನೌಕರರ ಮುಷ್ಕರಕ್ಕೆ ಹೋಗದಂತೆ ಕೋಡಿಹಳ್ಳಿ ಚಂದ್ರಶೇಖರ್ಗೆ ಪೊಲೀಸ್ ದಿಗ್ಬಂಧನ - ಕೋಡಿಹಳ್ಳಿ ಚಂದ್ರಶೇಖರ್ಗೆ ಪೊಲೀಸ್ ದಿಗ್ಬಂಧನ
ಇಂದಿಗೆ ಸಾರಿಗೆ ನೌಕರರ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಭಿಕ್ಷಾಟನೆ ಮಾಡುವ ಮೂಲಕ ನೌಕರರು ವಿಭಿನ್ನವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮುಷ್ಕರ ಹತ್ತಿಕ್ಕಲು ಮುಂದಾಗಿರುವ ಸರ್ಕಾರ ಕೋಡಿಹಳ್ಳಿ ಚಂದ್ರಶೇಖರ್ಗೆ ದಿಗ್ಭಂಧನ ಹೇರಲಾಗಿದೆ. ಅವರನ್ನು ವಶಕ್ಕೆ ಪಡೆಯಲು ಅವರ ಕಚೇರಿ ಮುಂದೆ 5 ಪೊಲೀಸ್ ಜೀಪ್ಗಳಲ್ಲಿ ದಿಗ್ಬಂಧನ ಹಾಕಲಾಗಿದೆ.
ಗಾಂಧಿನಗರದ ಕೋಡಿಹಳ್ಳಿ ಚಂದ್ರಶೇಖರ್ ಕಚೇರಿಯ ಮುಂದೆ 5 ಪೊಲೀಸ್ ಜೀಪ್ಗಳಲ್ಲಿ ದಿಗ್ಬಂಧನ ಹಾಕಲಾಗಿದ್ದು, ಕಚೇರಿಯಿಂದ ಹೊರಬಂದ ಕೂಡಲೇ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆ ಕಚೇರಿಯಿಂದಲೇ ಭಿಕ್ಷಾಟನಾ ಹೋರಾಟಕ್ಕೆ ಚಾಲನೆ ನೀಡಿ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ಸಂಬಳ ನೀಡದೆ ನೌಕರರಿಗೆ ಯುಗಾದಿ ಹಬ್ಬ ಆಚರಿಸಲು ಆಗುತ್ತಿಲ್ಲ. ದಮನಕಾರಿ ನೀತಿಯನ್ನ ಸರ್ಕಾರ ಅನುಸರಿಸುತ್ತಿದೆ. ಭಿಕ್ಷೆ ಬೇಡುವುದು ಅಪರಾಧ ಎಂದ್ರೂ ಅದನ್ನ ನಾವು ಮಾಡಲೇಬೇಕು. ಯುಗಾದಿ ಹಬ್ಬದ ಸಂಭ್ರಮ ಬಿಟ್ಟು, ಭಿಕ್ಷೆ ಬೇಡುತ್ತಿದ್ದೇವೆ. ಸಂಜೆಯೊಳಗೆ ಡಿಪೋ ಮ್ಯಾನೇಜರ್ ವಿರುದ್ಧ ದೂರು ದಾಖಲಾಗುತ್ತದೆ ಅಂದರು.
ಚಳವಳಿ ನಡೆಸಲು ಆಚೆ ಬಂದ್ರೆ ಬಂಧನ ಮಾಡೋದಾಗಿ ಹೇಳ್ತಿದ್ದಾರೆ. ನಮ್ಮ ಮುಷ್ಕರ ಹತ್ತಿಕ್ಕಲು ಎಲ್ಲಾ ತಯಾರಿ ಆಗಿದೆ. ನಿನ್ನೆ ಕೂಡ ಕೆಲವರನ್ನ ವಜಾ ಮಾಡಿದ್ದಾರೆ. ಕೆಲವೊಂದು ಕಡೆ ಬಸ್ಗೆ ಕಲ್ಲು ತೂರಾಟ ಮಾಡಿದ್ದಾರೆ. ಆದರೆ ಕಲ್ಲು ತೂರಾಟ ಮಾಡಿರುವವರು ಸಾರಿಗೆ ನೌಕರರಲ್ಲ. ನಮ್ಮ ನೌಕರರು ಯಾರು ಕೂಡ ಕಾನೂನು ಉಲ್ಲಂಘನೆ ಮಾಡೋದಿಲ್ಲ ಅಂತ ತಿಳಿಸಿದರು. ಮಾರ್ಚ್ ತಿಂಗಳ ಸಂಬಳ ನೀಡಲು ಇಂದೇ ಡೆಡ್ ಲೈನ್ ಕೊಟ್ಟಿದ್ವಿ. ವೇತನ ನೀಡಿಲ್ಲ ಅಂದರೆ ನಾಳೆಯಿಂದ ಮತ್ತಷ್ಟು ಮುಷ್ಕರ ತೀವ್ರಗೊಳ್ಳುತ್ತದೆ ಅಂತ ಕೋಡಿಹಳ್ಳಿ ಎಚ್ಚರಿಕೆ ರವಾನಿಸಿದರು.
TAGGED:
ksrtc staffs strike