ಕರ್ನಾಟಕ

karnataka

ETV Bharat / state

ತಂದೆಯಿಂದಲೇ ಲೈಂಗಿಕ ಕಿರುಕುಳ ಆರೋಪ: ಮನೆ ಬಿಟ್ಟಿದ್ದ ಕಂದಮ್ಮ ಚೈಲ್ಡ್ ಕೇರ್ ಹೋಂನಲ್ಲಿ ಸೇಫ್ - Bengaluru special Force

ತಂದೆ ಲೈಂಗಿಕ ದೌರ್ಜನ್ಯ ನೀಡುತ್ತಾನೆ ಎಂದು ಆರೋಪಿಸಿ ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು ಬೆಂಗಳೂರಿನ ರೈಲ್ವೆ ಸಂರಕ್ಷಣಾ ಪಡೆಯ ವಿಶೇಷ ತಂಡವು ರಕ್ಷಣೆ ಮಾಡಿದೆ.

railway-station
ತಂದೆಯಿಂದಲೇ ಲೈಂಗಿಕ ಕಿರುಕುಳ ಆರೋಪ

By

Published : Jul 11, 2021, 9:08 AM IST

ಬೆಂಗಳೂರು: ಮಹಿಳಾ ಶಕ್ತಿ ತಂಡ ಎಂಬ ಬೆಂಗಳೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಶೇಷ ತಂಡವು ರೈಲು ಸಂಖ್ಯೆ 02295ರಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ‘ಶಕ್ತಿ’ ಎಂದು ಹೆಸರಿಸಲಾಗಿರುವ ರೈಲ್ವೆ ತಂಡ ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧ ತಡೆಗಟ್ಟುವಲ್ಲಿ ಮತ್ತು ಬೆಂಗಳೂರು ವಿಭಾಗದ ಎಲ್ಲಾ ರೈಲ್ವೆ ಸಂರಕ್ಷಣಾ ಪಡೆ ತಂಡಗಳು ಮುಂಚೂಣಿಯಲ್ಲಿವೆ.

ಬಾಲಕಿಯನ್ನು ರಕ್ಷಿಸಿ ವಿಚಾರಣೆ ನಡೆಸಿದ ತಂಡಕ್ಕೆ ಆಕೆ ಮಾಹಿತಿ ನೀಡಿದ್ದಾರೆ. "ನಾನು ಬಿಹಾರದ ಪೂರ್ವ ಚಂಪಾರಣ್​ (ಮೋತಿಹಾರಿ) ನಿವಾಸಿ. ನನ್ನ ತಂದೆಯಿಂದಲೇ ಪದೇ ಪದೇ ನಡೆಯುವ ಲೈಂಗಿಕ ಕಿರುಕುಳದಿಂದಾಗಿ ಬೇಸರಗೊಂಡು ಮನೆಯಿಂದ ಓಡಿ ಬಂದಿದ್ದೇನೆ" ಎಂದಿದ್ದಾರೆ.

ಇದನ್ನು ಓದಿ: ಶಾಸಕ ಪುಟ್ಟರಂಗಶೆಟ್ಟಿ ಮಗನ ಕಾರಿಗೆ ಅಡ್ಡ ಹಾಕಿದ ಆನೆ!

ರಕ್ಷಣೆ ನಡೆಸಿದ ನಂತರ ಆಕೆಯನ್ನು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಆರ್‌ಪಿಎಫ್ ಪೋಸ್ಟ್​ನ ಮಕ್ಕಳ ಸ್ನೇಹಿ ಸ್ಥಳಕ್ಕೆ ಕರೆತರಲಾಗಿದೆ. ಔಪಚಾರಿಕತೆಯ ನಂತರ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಸಂಬಂಧಿತ ಕಾನೂನಿನಡಿಯಲ್ಲಿ ಹೆಚ್ಚಿನ ಸಂರಕ್ಷಣೆ ಮತ್ತು ಅಗತ್ಯ ಕ್ರಮಗಳಿಗಾಗಿ ಆಕೆಯನ್ನು ಬಾಸ್ಕೊ ಚೈಲ್ಡ್ ಕೇರ್ ಹೋಂ ಸಂಸ್ಥೆಗೆ ಸ್ಥಳಾತರಿಸಲಾಗಿದೆ. ಸದ್ಯ ಬಾಲಕಿ ಆರೋಗ್ಯವಾಗಿ ಸುರಕ್ಷಿತವಾಗಿರುವುದಾಗಿ ರೈಲ್ವೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details